ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಬೇರೆಯಾಗಿದ್ದಾರೆಯೇ? ಪೋಸ್ಟ್ ವೈರಲ್

ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮಾಡಿರುವ ಟ್ವೀಟ್ ವೊಂದು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಇವರಿಬ್ಬರೂ ಬೇರೆ ಆಗಿದ್ದಾರೆಯೇ? ಎಂಬ ಅನುಮಾನ ಹುಟ್ಟಿಸಿತ್ತು.
ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ
Updated on

ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮಾಡಿರುವ ಟ್ವೀಟ್ ವೊಂದು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಇವರಿಬ್ಬರೂ ಬೇರೆ ಆಗಿದ್ದಾರೆಯೇ? ಎಂಬ ಅನುಮಾನ ಹುಟ್ಟಿಸಿತ್ತು.

 ನಾವು ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು  ರಾಜ್ ಕುಂದ್ರಾ ಇಂದು ಬೆಳಗ್ಗೆ 1 ಗಂಟೆ ಸುಮಾರಿನಲ್ಲಿ ಟ್ವೀಟ್ ಮಾಡಿದ್ದರು.

ಇದು ವಿಚ್ಛೇದನವೇ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಆಲ್ಕೋಹಾಲ್ ಕುಡಿದು ಮಾಡಿರುವ ಟ್ವೀಟ್  ಬಯೋಪಿಕ್ ‘ಯುಟಿ 69’ ರಿಲೀಸ್ ಆಗುತ್ತಿದೆ. ಇದರ ಪ್ರಮೋಷನ್ ಗಿಮಿಕ್ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಬಳಿಕ ಮತ್ತೊಂದು ಟ್ವೀಟ್ ನಲ್ಲಿ ಸ್ಪಷ್ಟನೆ ನೀಡಿರುವ ರಾಜ್ ಕುಂದ್ರಾ, ಮಾಸ್ಕ್ ನಿಂದ ಬೇರೆ ಯಾಗಿರುವುದಾಗಿ ತಿಳಿಸಿದ್ದಾರೆ. ಮಾಸ್ಕ್ ಗೆ ವಿದಾಯ, ಈಗ ಪ್ರತ್ಯೇಕವಾಗುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಜೀವನದ ಮುಂದಿನ ಹಂತಕ್ಕೆ ಹೋಗುತ್ತಿದ್ದೇನೆ ಎಂದು ಅವರು ಬರೆದುಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆ ಅರೆಸ್ಟ್‌ ಆಗಿದ್ದ ರಾಜ್ ಕುಂದ್ರಾ, ಬೇಲ್‌ ಪಡೆದು ಹೊರ ಬಂದ ದಿನದಿಂದ ತಮ್ಮ ಮುಖಕ್ಕೆ ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು. ಬುಧವಾರ UT 69' ಸಿನಿಮಾ ಟ್ರೇಲರ್‌ ರಿಲೀಸ್‌ ವೇಳೆ  ಮಾಸ್ಕ್‌ ತೆಗೆದು ಮುಖ ತೋರಿಸಿದ್ದರು.

 2009ರಲ್ಲಿ ಮದುವೆಯಾದ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ದಂಪತಿಗೆ ವಿಯಾನ್ ಹಾಗೂ ಸಮಿಶಾ ಹೆಸರಿನ  ಇಬ್ಬರು ಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com