ಅಮೀರ್ ಖಾನ್- ಅಖಿಲ್ ಮಿಶ್ರಾ
ಅಮೀರ್ ಖಾನ್- ಅಖಿಲ್ ಮಿಶ್ರಾ

3 ಈಡಿಯೆಟ್ಸ್ ಖ್ಯಾತಿಯ ನಟ ಅಖಿಲ್ ಮಿಶ್ರಾ ನಿಧನ

3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ಇಂದು ನಿಧನರಾದರು.  ಮುಂಬೈ ನಲ್ಲಿರುವ ಅವರ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಖಿಲ್ ಮಿಶ್ರಾ ಪತ್ನಿ ಸುಝೇನ್ ಬರ್ನರ್ಟ್ ತಿಳಿಸಿದ್ದಾರೆ.
Published on

ಮುಂಬೈ: 3 ಈಡಿಯೆಟ್ಸ್ ಸಿನಿಮಾ ಖ್ಯಾತಿಯ ನಟ ಅಖಿಲ್ ಮಿಶ್ರಾ ಇಂದು ನಿಧನರಾದರು.  ಮುಂಬೈ ನಲ್ಲಿರುವ ಅವರ ನಿವಾಸದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಖಿಲ್ ಮಿಶ್ರಾ ಪತ್ನಿ ಸುಝೇನ್ ಬರ್ನರ್ಟ್ ತಿಳಿಸಿದ್ದಾರೆ.

ಮಿಶ್ರಾ ಅವರಿಗೆ ರಕ್ತದ ಒತ್ತಡದ ಸಮಸ್ಯೆ ಇತ್ತು, ಮನೆಯಲ್ಲಿ ಬಿದ್ದು ತೀವ್ರ ಗಾಯಗಳಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 

ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕುರ್ಚಿಯ ಮೇಲಿಂದ ಬಿದ್ದು ತಲೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿತ್ತು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಎಚ್ಚರವಾಗಿಯೇ ಇದ್ದರು.  ಆ ನಂತರ ಆಂತರಿಕವಾಗಿ ರಕ್ತಸ್ರಾವವಾಗಿತ್ತು. ವೈದ್ಯರ ಶ್ರಮದ ಹೊರತಾಗಿಯೂ ಅವರು ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಮಿಶ್ರಾ ನಿಧನರಾದಾಗ ಅವರ ಪತ್ನಿ ಬರ್ನರ್ಟ್ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿದ್ದರು. ಹೆಚ್ಚಾಗಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ ಮಿಶ್ರಾ, ಅಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮಾನ್ ಜೋಶಿ ನಟಿಸಿದ 3 ಈಡಿಯಟ್ಸ್‌ನಲ್ಲಿ ಲೈಬ್ರೇರಿಯನ್ ದುಬೆ ಪಾತ್ರಕ್ಕಾಗಿ ಉತ್ತಮವಾಗಿ ನೆನಪಿನಲ್ಲಿ ಉಳಿದಿದ್ದಾರೆ.

ಅವರು ಡಾನ್, ಗಾಂಧಿ, ಮೈ ಫಾದರ್, ಉತ್ತರನ್, ಉಡಾನ್ ಮತ್ತು ಶ್ರೀಮಾನ್ ಶ್ರೀಮತಿ ಮುಂತಾದ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಮಿಶ್ರಾ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
 

X

Advertisement

X
Kannada Prabha
www.kannadaprabha.com