ಆಸ್ಕರ್ 2024: ಮಲಯಾಳಂನ '2018' ಚಿತ್ರ ಭಾರತದಿಂದ ಅಧಿಕೃತ ಎಂಟ್ರಿ

ಈ ಬಾರಿ ಆಸ್ಕರ್ 2024ಕ್ಕೆ ಭಾರತದಿಂದ ಅನೇಕ ಚಲನಚಿತ್ರಗಳನ್ನು ಕಳುಹಿಸಲಾಗಿದ್ದು ಅದರಲ್ಲಿ ಮಲಯಾಳಂನ '2018' ಚಿತ್ರವನ್ನು ಅಧಿಕೃತವಾಗಿ ಈ ರೇಸ್‌ನಲ್ಲಿ ಸೇರಿಸಲಾಗಿದೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ನವದೆಹಲಿ: ಈ ಬಾರಿ ಆಸ್ಕರ್ 2024ಕ್ಕೆ ಭಾರತದಿಂದ ಅನೇಕ ಚಲನಚಿತ್ರಗಳನ್ನು ಕಳುಹಿಸಲಾಗಿದ್ದು ಅದರಲ್ಲಿ ಮಲಯಾಳಂನ '2018' ಚಿತ್ರವನ್ನು ಅಧಿಕೃತವಾಗಿ ಈ ರೇಸ್‌ನಲ್ಲಿ ಸೇರಿಸಲಾಗಿದೆ.

ಆಸ್ಕರ್ 2024 ಯಾವಾಗ ನಡೆಯಲಿದೆ?
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದ ದಿನಾಂಕವನ್ನು ಪ್ರಕಟಿಸಿದೆ. 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ವರ್ಷ ಮಾರ್ಚ್ 10ರಂದು ನಡೆಯಲಿದೆ.

2023ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದ 2018 ಚಿತ್ರದ ಇಂಡಸ್ಟ್ರಿ ಹಿಟ್ ಆಗಿತ್ತು. ಚಿತ್ರವನ್ನು ಜೂಡ್ ಆಂಥೋನಿ ಜೋಸೆಫ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್ ಮತ್ತು ಅಪರ್ಣಾ ಬಾಲಮುರಳಿ ಮುಂತಾದ ನಟರಿದ್ದಾರೆ.

2018ರಲ್ಲಿ ಕೇರಳಕ್ಕೆ ಅಪ್ಪಳಿಸಿದ ಭೀಕರ ಪ್ರವಾಹದಲ್ಲಿ ಪಾರಾಗಲು ಜನರು ಶ್ರಮಿಸುವ ನೈಜ್ಯ ಘಟನೆಗಳನ್ನು ಆಧರಿಸಿದ ಚಿತ್ರವಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಜನರು ಮತ್ತು ಸಮುದಾಯದ ಶಕ್ತಿಗೆ ಈ ಚಿತ್ರ ಸಾಕ್ಷಿಯಾಗಿದೆ.

30 ಕೋಟಿ ರುಪಾಯಿ ಬಜೆಟ್ ನಲ್ಲಿ ತಯಾರಾದ ಚಿತ್ರದ 200 ಕೋಟಿ ರೂಪಾಯಿ ಗಳಿಸುವ ಮೂಲಕ ಮಲಯಾಳಂನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com