ಹಿರಿಯ ನಟಿ ವಹೀದಾ ರೆಹಮಾನ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟ!

ಬಾಲಿವುಡ್ ನ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಅವರಿಗೆ ಈ ಬಾರಿಯ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ.
ವಹೀದಾ ರೆಹಮಾನ್
ವಹೀದಾ ರೆಹಮಾನ್

ಬಾಲಿವುಡ್ ನ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಅವರಿಗೆ ಈ ಬಾರಿಯ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ.

ದೇಶದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ರೆಹಮಾನ್ ಅವರು "ಪ್ಯಾಸಾ", "ಸಿಐಡಿ", "ಗೈಡ್", "ಕಾಗಜ್ ಕೆ ಫೂಲ್", "ಖಾಮೋಶಿ" ಮತ್ತು "ತ್ರಿಶೂಲ್" ಸೇರಿದಂತೆ ಚಲನಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯ ಹಂಚಿಕೊಂಡಿರುವ ಠಾಕೂರ್, "ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಹೀದಾ ರೆಹಮಾನ್ ಜಿ ಅವರಿಗೆ ಈ ವರ್ಷ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. 

85 ವರ್ಷದ ವಹೀದಾ ರೆಹಮಾನ್ ಅವರು 1955 ರ ತೆಲುಗು ಚಿತ್ರಗಳಾದ "ರೋಜುಲು ಮರಾಯಿ" ಮತ್ತು "ಜಯಸಿಂಹ" ದಲ್ಲಿ ನಟನೆ ಮೂಲಕ ಬಣ್ಣದ ಬದುಕು ಪ್ರವೇಶಿಸಿದರು. 1956 ರ ದೇವ್ ಆನಂದ್ ಅವರೊಂದಿಗೆ "ಸಿಐಡಿ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರೆಹಮಾನ್ ಕೊನೆಯ ಬಾರಿಗೆ 2021ರಲ್ಲಿ "ಸ್ಕೇಟರ್ ಗರ್ಲ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಪೌರಾಣಿಕ ಚಿತ್ರಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ 90 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1971ರಲ್ಲಿ "ರೇಷ್ಮಾ ಮತ್ತು ಶೇರಾ" ಚಿತ್ರಗಳಲ್ಲಿ ಕುಲದ ಮಹಿಳೆಯ ಪಾತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ರೆಹಮಾನ್ ಅವರು, ಈಗಾಗಲೇ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com