ಬಾಲಿವುಡ್ ನಟ ಸೋನು ಸೂದ್ ಸಹಾಯದಿಂದ ಪೈಲಟ್ ಆದ ಯುವಕ! ಇದೀಗ ಆ ಒಂದು ಕ್ಷಣಕ್ಕಾಗಿ ಕಾತುರ..

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉದಾರ ನೆರವಿನ ಮೂಲಕ ಕೆಲವರ ಬಾಳಿಗೆ ಬೆಳಕಾಗಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಪೈಲಟ್ ಆಗುವ ಯುವಕನೊಬ್ಬನ ಕನಸು ನನಸು ಮಾಡಿಕೊಳ್ಳಲು ನೆರವಾಗಿದ್ದಾರೆ.
ಪೈಲಟ್ ವಂಶಿ ಹಾಗೂ ಸೋನು ಸೂದ್ ಸಾಂದರ್ಭಿಕ ಚಿತ್ರ
ಪೈಲಟ್ ವಂಶಿ ಹಾಗೂ ಸೋನು ಸೂದ್ ಸಾಂದರ್ಭಿಕ ಚಿತ್ರ

ಮುಂಬೈ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉದಾರ ನೆರವಿನ ಮೂಲಕ ಕೆಲವರ ಬಾಳಿಗೆ ಬೆಳಕಾಗಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಪೈಲಟ್ ಆಗುವ ಯುವಕನೊಬ್ಬನ ಕನಸು ನನಸು ಮಾಡಿಕೊಳ್ಳಲು ನೆರವಾಗಿದ್ದಾರೆ. ಹೌದು.  ವಿಮಾನ ಚಾಲಕರಾಗಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ವಂಶಿ ಎಂಬ ಯುವಕನಿಗೆ ಸೋನು ಸೋದು ಆರ್ಥಿಕ ಸಹಾಯ ಮಾಡಿದ್ದು, ಈಗ ಆತ ಪೈಲಟ್ ಆಗಿ ಹೊರಹೊಮ್ಮಿದ್ದಾರೆ.

ಅಲ್ಲದೇ, ತನ್ನ ಭವಿಷ್ಯಕ್ಕೆ ಆಸರೆಯಾದ ನಟನನ್ನು ವಿಮಾನದಲ್ಲಿ ಹಾರಾಟ ನಡೆಸುವ ಕ್ಷಣಕ್ಕಾಗಿ ಯುವಕ ಕಾತುರದಿಂದ ಕಾಯುತ್ತಿದ್ದಾನೆ. ವಂಶಿ ವಾಯುಯಾನ ​​ಅಕಾಡೆಮಿಯೊಂದರಲ್ಲಿ ಪೈಲಟ್ ಆಗಿ, ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸೋನು ಅವರ ಪರಿಣಾಮಕಾರಿ ಉದಾರತೆಗೆ ಸಾಕ್ಷಿಯಾಗಿದೆ.

ಬಡನತದ ಕಾರಣದಿಂದ ಪೈಲಟ್ ಆಗಲ್ಲ ಅಂದುಕೊಂಡಿದ್ದ ವಂಶಿ, ಏರ್‌ಲೈನ್‌ನಲ್ಲಿ ಸಹಾಯಕ ಮತ್ತು ಕ್ಲೀನರ್ ಆಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಸೋನು ಸೊದ್ ಬಳಿ ಸಹಾಯ ಕೋರಿದ್ದರು. ಸೋನು ಸೂದ್ ಪ್ರತಿಷ್ಠಾನಕ್ಕೆ ಮನವಿ ಸಲ್ಲಿಸಿದ ತಕ್ಷಣ ಹಣಕಾಸಿನ ನೆರವು ಸಿಕ್ಕಿತ್ತು. ಇದು  ತನ್ನ ಮಹತ್ವಾಕಾಂಕ್ಷೆಗಳನ್ನು ಪುನರುಜ್ಜೀವನಗೊಳಿಸಿ, ಆಸೆಗಳಿಗೆ ರೆಕ್ಕೆ ಫುಕ್ಕ ಬರುವ ಮೂಲಕ ಜೀವನಕ್ಕೆ ತಿರುವು ಆಯಿತು ಎಂದು ವಂಶಿ ನೆನಪಿಸಿಕೊಳ್ಳುತ್ತಾರೆ. 

ಸೋನು ಸೂದ್‌ರನ್ನು ವಿಮಾನದಲ್ಲಿ ಹಾರಿಸುವುದು ನನ್ನ ಕನಸು, ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈಗ, ನಾನು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದೇನೆ ಮತ್ತು ಸೋನು ಸೂದ್ ಅವರೇ ನನ್ನ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು. ಆ ಒಂದು ವಾಕ್ಯವು ನನಗೆ ಜೀವಮಾನದ ಸಾಧನೆಯಾಗಿದೆ. ಅವರ ಪ್ರೋತ್ಸಾಹ ನನ್ನ ಜೀವನವನ್ನು ಮಾತ್ರವಲ್ಲದೆ ಅನೇಕರ ಜೀವನವನ್ನೂ ಬದಲಾಯಿಸಿದೆ ಎಂದು ವಂಶಿ ಹೇಳುತ್ತಾರೆ.

ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯಿಸಿರುವ ಸೋನು ಸೂದ್, ಕೆಲವು ಸಂದರ್ಭದಲ್ಲಿ ದೇವರೇ ಮಾರ್ಗದರ್ಶನ ಮಾಡುತ್ತಾನೆ. ಒಬ್ಬರು ಮತ್ತೊಬ್ಬರಿಗೆ ನೆರವಾಗುವ ಮೂಲಕ ದೊಡ್ಡದನ್ನು ಸಾಧಿಸಬಹುದು. ಕೋವಿಡ್ ಸಂದರ್ಭದಲ್ಲಿ ಆರಂಭವಾದ ಇತರರಿಗೆ ಸಹಾಯ ಮಾಡುವ ಗುಣ, ತಮ್ಮ ಕೊನೆಯ ಉಸಿರು ಇರುವವರೆಗೂ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com