ಬಾಕ್ಸ್ ಆಫೀಸ್‌ನಲ್ಲಿ 'ಅನಿಮಲ್' ಸುನಾಮಿ; ಬಿಡುಗಡೆಯಾದ ಮೂರೇ ದಿನಕ್ಕೆ 356 ಕೋಟಿ ರೂ. ಗಳಿಕೆ!

ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 356 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರವು ಶುಕ್ರವಾರ (ಡಿಸೆಂಬರ್ 1) ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಅನಿಮಲ್ ಚಿತ್ರದ ಪೋಸ್ಟರ್
ಅನಿಮಲ್ ಚಿತ್ರದ ಪೋಸ್ಟರ್

ಮುಂಬೈ: ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 356 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ.

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರವು ಶುಕ್ರವಾರ (ಡಿಸೆಂಬರ್ 1) ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಪ್ರೊಡಕ್ಷನ್ ಬ್ಯಾನರ್ T-ಟೀರಿಸ್ ಟ್ವೀಟ್ ಮಾಡಿದ್ದು, "ಅನಿಮಲ್" ಚಿತ್ರ ವಾರಾಂತ್ಯ ಕಂಡ ಗಳಿಕೆಯನ್ನು ಹಂಚಿಕೊಂಡಿದೆ. 'ಬಾಕ್ಸ್ ಆಫೀಸ್ ಸುನಾಮಿ! ವಿಶ್ವಾದಾದ್ಯಂತ ಅನಿಮಲ್ ಸಿನಿಮಾ ವಾರಾಂತ್ಯದಲ್ಲಿ ಒಟ್ಟು 356 ಕೋಟಿ ರೂ. ಸಂಗ್ರಹವಾಗಿದೆ' ಎಂದು ಪೋಸ್ಟ್ ಬರೆಯಲಾಗಿದೆ.

ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ, ಸುರೇಶ್ ಒಬೆರಾಯ್ ಮತ್ತು ಪ್ರೇಮ್ ಚೋಪ್ರಾ ಕೂಡ ಇದ್ದಾರೆ.

ಇದು ರಣಬೀರ್‌ರ ರಣವಿಜಯ್ ಸಿಂಗ್ ಮತ್ತು ಅನಿಲ್ ಕಪೂರ್ ನಿರ್ವಹಿಸಿದ ಅವರ ತಂದೆ ಬಲ್ಬೀರ್ ಸಿಂಗ್ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಹಿಂಸಾತ್ಮಕ ಜಗತ್ತನ್ನು ಪ್ರದರ್ಶಿಸುತ್ತದೆ.

ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದೆ. ಅನಿಮಲ್ ಅನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿ ಅವರ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com