ಕೇವಲ 8 ದಿನಗಳಲ್ಲಿ 667 ಕೋಟಿ ರೂ. ಬಾಚಿದ 'ಪಠಾಣ್'
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಕೇವಲ ದಿನಗಳಲ್ಲಿ ಬರೋಬ್ಬರಿ 667 ಕೋಟಿ ರೂಪಾಯಿ ಬಾಚಿದೆ.
Published: 02nd February 2023 05:35 PM | Last Updated: 02nd February 2023 08:22 PM | A+A A-

ಪಠಾಣ್ ಚಿತ್ರದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಕೇವಲ ದಿನಗಳಲ್ಲಿ ಬರೋಬ್ಬರಿ 667 ಕೋಟಿ ರೂಪಾಯಿ ಬಾಚಿದೆ.
ಪಠಾಣ್ ಚಿತ್ರ ವಿವಾದದ ನಡುವೆಯೂ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪಠಾಣ್ ಚಿತ್ರ ವಿಶ್ವಾದ್ಯಂತ ಒಟ್ಟು 667 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್(ವೈಆರ್‌ಎಫ್) ಗುರುವಾರ ಹೇಳಿದೆ.
ವೈಆರ್‌ಎಫ್ ಪ್ರಕಾರ, ಎಂಟನೇ ದಿನದಂದು, "ಪಠಾಣ್" ಭಾರತದಲ್ಲಿ 18.25 ಕೋಟಿ ರೂಪಾಯಿ ಗಳಿಸಿದೆ (ಹಿಂದಿ -- ರೂ 17.50 ಕೋಟಿ, ಎಲ್ಲಾ ಡಬ್ಬಿಂಗ್ ಆವೃತ್ತಿಗಳಿಂದ - ರೂ 0.75 ಕೋಟಿ). ಬಿಡುಗಡೆಯಾದಾಗಿನಿಂದ, ಭಾರತದಲ್ಲಿ ಇದುವರೆಗೆ ರೂ 348.50 (ಹಿಂದಿ - ರೂ 336 ಕೋಟಿ, ರೂ 12.50 ಕೋಟಿ) ಕಲೆಕ್ಷನ್ ಮಾಡಿದೆ ಮತ್ತು ವಿದೇಶಗಳಲ್ಲಿ 250 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದನ್ನು ಓದಿ: ಯಾರಿಗೂ ಗೊತ್ತಿರದ 'ಯಶ್' 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್ ಯಶಸ್ಸು ಯಾವ ಲೆಕ್ಕ? ಶಾರುಖ್ ಕಾಲೆಳೆದ ಆರ್ ಜಿವಿ
ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' (2012) ಮತ್ತು 'ಟೈಗರ್ ಜಿಂದಾ ಹೈ' (2017), ಮತ್ತು ಹೃತಿಕ್ ರೋಷನ್ (2019) ಒಳಗೊಂಡ 'ವಾರ್' ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಮಹತ್ವಾಕಾಂಕ್ಷೆಯ ಪತ್ತೇದಾರಿ ಕಥೆ ಸರಣಿಯಲ್ಲಿ 'ಪಠಾಣ್' ನಾಲ್ಕನೇ ಚಲನಚಿತ್ರವಾಗಿದೆ. ನಾಲ್ಕು ವರ್ಷಗಳಲ್ಲಿ ಪ್ರಮುಖವಾಗಿ ಶಾರುಖ್ ಅವರ ಮೊದಲ ದೊಡ್ಡ ಪರದೆಯ ಬಿಡುಗಡೆಯಾದ ಆಕ್ಷನ್ ಚಿತ್ರ ಇದಾಗಿದ್ದು, ಅದರ ಆರಂಭಿಕ ದಿನದಲ್ಲಿ ಜಾಗತಿಕವಾಗಿ 106 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ನಂತರ ಎರಡನೇ ದಿನದಲ್ಲಿ 113.6 ಕೋಟಿ ರೂಪಾಯಿ, ಮೂರನೇ ದಿನದಲ್ಲಿ 90 ಕೋಟಿ ರೂಪಾಯಿ ಮತ್ತು 4ನೇ ದಿನ 116 ಕೋಟಿ ರೂಪಾಯಿಗಳನ್ನು ಗಳಿಸಿತ್ತು.