ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ರೂ.800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ 'ಪಠಾಣ್'
ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಹೊಸ ಹೊಸ ದಾಖಲೆ ಬರೆಯುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 12 ದಿನಗಳಲ್ಲಿ ವಿಶ್ವದಾದ್ಯಂತ ರೂ. 832 ಕೋಟಿ ಗೂ ಅಧಿಕ ಕಲೆಕ್ಷನ್ ಮಾಡಿದೆ.
Published: 06th February 2023 09:17 PM | Last Updated: 06th February 2023 09:22 PM | A+A A-

ಪಠಾಣ್ ಚಿತ್ರದ ಫೋಸ್ಟರ್
ಮುಂಬೈ: ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಹೊಸ ಹೊಸ ದಾಖಲೆ ಬರೆಯುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 12 ದಿನಗಳಲ್ಲಿ ವಿಶ್ವದಾದ್ಯಂತ ರೂ. 832 ಕೋಟಿ ಗೂ ಅಧಿಕ ಕಲೆಕ್ಷನ್ ಮಾಡಿದೆ.
ಯಶ್ ರಾಜ್ ಫಿಲಿಂಸ್ ಪ್ರಕಾರ, ಸಿದ್ದಾರ್ಥ್ ಆನಂದ್ ನಿರ್ದೇಶನದ ಚಿತ್ರ ಇಂದು ದೇಶದಲ್ಲಿ ರೂ. 28.50 ಕೋಟಿ ( ಹಿಂದಿಯಲ್ಲಿ ರೂ.27.50 ಕೋಟಿ, ಡಬ್ಬಿಂಗ್ ವರ್ಸನ್ ನಲ್ಲಿ ರೂ. 1 ಕೋಟಿ) ಗಳಿಸಿದೆ.
ಇದನ್ನೂ ಓದಿ: ಕೇವಲ 8 ದಿನಗಳಲ್ಲಿ 667 ಕೋಟಿ ರೂ. ಬಾಚಿದ 'ಪಠಾಣ್'
12 ದಿನಗಳಲ್ಲಿ ಪಠಾಣ್' ದೇಶದಲ್ಲಿ ರೂ. 515 ಕೋಟಿ ಗಳಿಸಿದ್ದರೆ, ವಿದೇಶಗಳಲ್ಲಿ 317.20 ಕೋಟಿ ಗಳಿಕೆಯನ್ನು ದಾಖಲಿಸಿದೆ ಎಂದು ಸ್ಟುಡಿಯೋ ಹೇಳಿಕೆಯಲ್ಲಿ ತಿಳಿಸಿದೆ. ನಾಲ್ಕು ವರ್ಷಗಳ ನಂತರ ತೆರೆ ಕಂಡಿರುವ ಶಾರುಖ್ ನಟನೆಯ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.