ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 'ಪಠಾಣ್' 900 ಕೋಟಿ ರೂ. ಕಲೆಕ್ಷನ್!

ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ರೂ. 901 ಕೋಟಿ ಕಲೆಕ್ಷನ್ ಮಾಡಿದೆ. 
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್

ಮುಂಬೈ: ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ರೂ. 901 ಕೋಟಿ ಕಲೆಕ್ಷನ್ ಮಾಡಿದೆ. 

ಯಶ್ ರಾಜ್ ಫಿಲಿಂಸ್ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಮೂರನೇ ವಾರ ದೇಶದಲ್ಲಿ ರೂ. 5.90 ಕೋಟಿ ಗಳಿಸಿದೆ. ದೇಶದಲ್ಲಿ ಒಟ್ಟಾರೇ, ರೂ. 558. 40 ಕೋಟಿ, ವಿದೇಶದಲ್ಲಿ ರೂ. 340. 60 ಕೋಟಿ ಸೇರಿದಂತೆ ವಿಶ್ವದಾದ್ಯಂತ ರೂ. 901 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ನಿರ್ಮಾಣ ಸಂಸ್ಥೆ  ಹೇಳಿಕೆಯಲ್ಲಿ ತಿಳಿಸಿದೆ.  

ಪಠಾಣ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾವಾಗಿದೆ ಎಂದು ಯಶ್ ರಾಜ್ ಫಿಲಿಂಸ್  ಹೇಳಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com