'ಶ್ರದ್ಧಾ ಕೊಲೆ ಕೇಸ್' ವಿವಾದದಲ್ಲಿ ಸಿಲುಕಿದ ಕ್ರೈಂ ಪ್ಯಾಟ್ರೋಲ್: ಅಫ್ತಾಬ್ ಪಾತ್ರವನ್ನು ಹಿಂದುವಾಗಿ ಚಿತ್ರಣ!

ಸತ್ಯ ಘಟನೆಗಳನ್ನು ಆಧರಿಸಿದ ಸೋನಿ ಟಿವಿ ಶೋ 'ಕ್ರೈಂ ಪ್ಯಾಟ್ರೋಲ್' ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಯಕ್ರಮದ ಒಂದು ಸಂಚಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 
'ಶ್ರದ್ಧಾ ಕೊಲೆ ಕೇಸ್' ವಿವಾದದಲ್ಲಿ ಸಿಲುಕಿದ ಕ್ರೈಂ ಪ್ಯಾಟ್ರೋಲ್: ಅಫ್ತಾಬ್ ಪಾತ್ರವನ್ನು ಹಿಂದುವಾಗಿ ಚಿತ್ರಣ!

ಸತ್ಯ ಘಟನೆಗಳನ್ನು ಆಧರಿಸಿದ ಸೋನಿ ಟಿವಿ ಶೋ 'ಕ್ರೈಂ ಪ್ಯಾಟ್ರೋಲ್' ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಯಕ್ರಮದ ಒಂದು ಸಂಚಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಸೋನಿ ಟಿವಿಯನ್ನು ಬಹಿಷ್ಕರಿಸುವ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗಿದ್ದು ಇದಾನ ಬಳಿಕ ಸೋನಿ ಟಿವಿ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದೆ.

ವಾಸ್ತವವಾಗಿ, ಕಾರ್ಯಕ್ರಮದ ಇತ್ತೀಚಿನ ಸಂಚಿಕೆಗಳಲ್ಲಿ, ಹುಡುಗಿಯ ಕಥೆಯನ್ನು ತೋರಿಸಲಾಗಿತ್ತು. ಇದರಲ್ಲಿ ಆಕೆಯ ಪ್ರಿಯಕರ ಆಕೆಯನ್ನು ಕೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದನು. ಶ್ರದ್ಧಾ ವಾಕರ್ ಹತ್ಯೆಯ ಕಥೆಯನ್ನು 'ಕ್ರೈಂ ಪ್ಯಾಟ್ರೋಲ್' ಸಂಚಿಕೆಯಲ್ಲಿ ತೋರಿಸಲಾಗಿದೆ ಎಂದು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕ್ರೈಂ ಪ್ಯಾಟ್ರೋಲ್ ನಲ್ಲಿ ಶ್ರದ್ಧಾ ಹತ್ಯೆ ಪ್ರಕರಣದ ಸತ್ಯಾಂಶಗಳನ್ನು ತಿರುಚಲಾಗಿದ್ದು ಇದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋನಿ ಟಿವಿಯ 'ಕ್ರೈಂ ಪ್ಯಾಟ್ರೋಲ್' ಕಾರ್ಯಕ್ರಮದ ಸಂಚಿಕೆಯಲ್ಲಿ, 'ಅಹಮದಾಬಾದ್-ಪುಣೆ ಮರ್ಡರ್' ಶೀರ್ಷಿಕೆಯ ಕಥೆಯನ್ನು ತೋರಿಸಲಾಗಿದೆ. ಇದರಲ್ಲಿ ವಿವಾಹಿತ ಪುರುಷನು ಮೊದಲು ತನ್ನ ಹೆಂಡತಿಯನ್ನು ಕೊಲ್ಲುತ್ತಾನೆ. ನಂತರ ಮೃತದೇಹವನ್ನು ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟಿದ್ದಾನೆ. ಆದರೆ ಇದರಲ್ಲಿ ಪಾತ್ರಗಳ ಧರ್ಮವನ್ನು ಬದಲಾಯಿಸಲಾಗಿದೆ. ಶ್ರದ್ಧಾ ವಾಕರ್ ಅವರನ್ನು ಕ್ರಿಶ್ಚಿಯನ್ ಹುಡುಗಿ ಅನಾ ಫೆರ್ನಾಂಡಿಸ್ ಆಗಿ ಚಿತ್ರಿಸಲಾಗಿದೆ ಮತ್ತು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಅವರನ್ನು ಹಿಂದೂ ಹುಡುಗ ಮಿಹೀರ್ ಆಗಿ ಮಾಡಲಾಗಿದೆ.

ಈ ಸಂಚಿಕೆಯಲ್ಲಿ ಅಫ್ತಾಬ್‌ನ ತಾಯಿ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದಳು. ಇದರೊಂದಿಗೆ ಇಬ್ಬರಿಗೂ ದೇವಸ್ಥಾನದಲ್ಲಿ ಮದುವೆ ಮಾಡಿ ತೋರಿಸಲಾಯಿತು. ಈ ಬದಲಾವಣೆಗಳ ನಂತರ, ಜನರು ತಮ್ಮ ಕೋಪವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. OTT ಪ್ಲಾಟ್‌ಫಾರ್ಮ್ ಸೋನಿ ಲಿವ್‌ನಿಂದ ಚಾನಲ್ ಈ ಸಂಚಿಕೆಯನ್ನು ಕಿತ್ತುಹಾಕಲಾಗಿದೆ. ಆದರೆ ಅದರ ಹಲವಾರು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಸಂಚಿಕೆಗಾಗಿ ಕ್ಷಮೆಯಾಚಿಸಿದ ಸೋನಿ ಟಿವಿ!
ಇದೀಗ ಸೋನಿ ಟಿವಿ ಈ ಬಗ್ಗೆ ಕ್ಷಮೆ ಯಾಚಿಸಿದೆ. ಇತ್ತೀಚಿನ ಕ್ರೈಂ ಪ್ಯಾಟ್ರೋಲ್ ಸಂಚಿಕೆಗೆ ಸಂಬಂಧಿಸಿದಂತೆ ಕೆಲವು ವೀಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ ಎಂದು ಚಾನೆಲ್ ಟ್ವೀಟ್ ಮಾಡಿದೆ. ಈ ಎಪಿಸೋಡ್ ಇತ್ತೀಚಿನ ಕೊಲೆ ಪ್ರಕರಣವನ್ನು ಹೋಲುತ್ತದೆ ಎಂದು ವೀಕ್ಷಕರು ಹೇಳುತ್ತಾರೆ. ಈ ಸಂಚಿಕೆಯು ಕಾಲ್ಪನಿಕ ಕಥೆಯನ್ನು ಆಧರಿಸಿದೆ ಎಂದು ನಾವು ತಿಳಿಸಲು ಬಯಸುತ್ತೇವೆ. ಇದರ ಕಥೆಯು 2011ರಲ್ಲಿ ನಡೆದ ಕೊಲೆ ಪ್ರಕರಣದಿಂದ ಪ್ರೇರಿತವಾಗಿದೆ. ಇತ್ತೀಚಿನ ಯಾವುದೇ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ವಿಷಯವು ಪ್ರಸಾರದ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ನಾವು ಸಂಪೂರ್ಣ ಕಾಳಜಿ ವಹಿಸುತ್ತೇವೆ. ನಮ್ಮ ವೀಕ್ಷಕರ ಭಾವನೆಗಳನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಈ ಸಂಚಿಕೆಯಿಂದ ಯಾವುದೇ ವೀಕ್ಷಕರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮಿಸಿ. ನಾವು ಈ ಸಂಚಿಕೆಯನ್ನು ತೆಗೆದುಹಾಕಿದ್ದೇವೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com