'ಈ ಜನರು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ': ಉರ್ಫಿ ಜಾವೇದ್ ಕಿಡಿ

'ಬಿಗ್ ಬಾಸ್ ಒಟಿಟಿ' ಖ್ಯಾತಿಯ ಉರ್ಫಿ ಜಾವೇದ್ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡು ಈ ಜನರು ನನ್ನನ್ನು 'ಆತ್ಮಹತ್ಯೆಗೆ' ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಟಿ ಉರ್ಫಿ ಜಾವೇದ್
ನಟಿ ಉರ್ಫಿ ಜಾವೇದ್

ಮುಂಬೈ: 'ಬಿಗ್ ಬಾಸ್ ಒಟಿಟಿ' ಖ್ಯಾತಿಯ ಉರ್ಫಿ ಜಾವೇದ್ ಮಹಾರಾಷ್ಟ್ರ ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರನ್ನು ಗುರಿಯಾಗಿಸಿಕೊಂಡು ಈ ಜನರು ನನ್ನನ್ನು 'ಆತ್ಮಹತ್ಯೆಗೆ' ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೇಚೆಗಷ್ಟೇ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಭೇಟಿ ಮಾಡಿ ದೂರು ದಾಖಲಿಸಿದ್ದ ಚಿತ್ರಾ ವಾಘ್ ಅವರು, ದೇಹದ ಅಂಗಾಂಗಗಳನ್ನ ಪ್ರದರ್ಶಿಸಿ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವ ಈ ನಟಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ಉರ್ಫಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಉರ್ಫಿ, 'ಅವರು (ಚಿತ್ರಾ ವಾಘ್) ಎನ್‌ಸಿಪಿಯಲ್ಲಿದ್ದಾಗ ಸಂಜಯ್ ರಾಥೋಡ್ ಬಂಧನಕ್ಕಾಗಿ ಕೂಗುತ್ತಿದ್ದ ಅದೇ ಮಹಿಳೆ, ನಂತರ ಅವರ ಪತಿ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದರು. ಪತಿಯನ್ನು ಉಳಿಸಲು ಅವರು ಬಿಜೆಪಿಗೆ ಸೇರಿದರು ಮತ್ತು ಅದಾದ ನಂತರ, ಸಂಜಯ್ ಮತ್ತು ಚಿತ್ರಾ ಉತ್ತಮ ಸ್ನೇಹಿತರಾದರು. ನಾನು ಕೂಡ ಬಿಜೆಪಿ ಸೇರಬೇಕಿತ್ತು. ಆಗ ನಾವಿಬ್ಬರೂ ಉತ್ತಮ ಸ್ನೇಹಿತರಾಗುತ್ತೇವೆ' ಎಂದು ಕಿಡಿಕಾರಿದ್ದಾರೆ.

ಮತ್ತೊಂದು ಸ್ಟೋರಿಯಲ್ಲಿ, ಜನರು ತನ್ನನ್ನು 'ಆತ್ಮಹತ್ಯೆ'ಗೆ ಪ್ರಚೋದಿಸುತ್ತಿದ್ದಾರೆ ಮತ್ತು 'ರಾಜಕಾರಣಿ ವಿರುದ್ಧದ ವಿಚಾರವನ್ನು ಅಪ್‌ಲೋಡ್ ಮಾಡುವುದು' ಎಷ್ಟು ಅಪಾಯಕಾರಿ ಎಂದು ಉಲ್ಲೇಖಿಸಿದ್ದಾರೆ.

'ರಾಜಕಾರಣಿಗಳ ವಿರುದ್ಧದ ವಿಚಾರಗಳನ್ನು ಅಪ್‌ಲೋಡ್ ಮಾಡುವುದು ತುಂಬಾ ಅಪಾಯಕಾರಿ ಎಂದು ನನಗೆ ತಿಳಿದಿದೆ. ಆದರೆ, ಈ ಜನರು ನನ್ನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದಾರೆ. ಹಾಗಾಗಿ ನಾನು ನನ್ನನ್ನು ಕೊಂದುಕೊಳ್ಳುತ್ತೇನೆ ಅಥವಾ ನನ್ನ ಮನಸ್ಸಿನೊಂದಿಗೆ ಮಾತನಾಡಿಕೊಳ್ಳುತ್ತೇನೆ ಮತ್ತು ಅವರಿಂದಲೇ ಕೊಲ್ಲಲ್ಪಡುತ್ತೇನೆ. ಆದರೆ, ಮತ್ತೆ, ನಾನೇ ಇದನ್ನು ಪ್ರಾರಂಭಿಸಿಲ್ಲ. ನಾನು ಯಾರಿಗೂ ಯಾವುದೇ ತಪ್ಪು ಮಾಡಿಲ್ಲ. ಅವರು ಯಾವುದೇ ಕಾರಣವಿಲ್ಲದೆ ನನ್ನ ಬಳಿಗೆ ಬರುತ್ತಿದ್ದಾರೆ' ಎಂದರು.

ತನ್ನ ಹಿಂದಿನ ಟ್ವೀಟ್‌ಗಳಲ್ಲಿಯೂ ಉರ್ಫಿ ಅವರ ವಿರುದ್ಧ ಕಿಡಿಕಾರಿದ್ದರು. 'ರಾಜಕಾರಣಿಯೊಬ್ಬರು ನೀಡಿದ ಮತ್ತೊಂದು ಪೊಲೀಸ್ ದೂರಿನ ಮೂಲಕ ನನ್ನ ಹೊಸ ವರ್ಷವನ್ನು ಪ್ರಾರಂಭಿಸಿದೆ! ಈ ರಾಜಕಾರಣಿಗಳಿಗೆ ಮಾಡಲು ನಿಜವಾದ ಕೆಲಸವಿಲ್ಲವೇ? ಈ ರಾಜಕಾರಣಿಗಳು ಮತ್ತು ವಕೀಲರು ದಡ್ಡರೇ? ಯಾವುದೇ ವ್ಯಕ್ತಿಯನ್ನು ಏಕಾಏಕಿ ಜೈಲಿಗೆ ಹಾಕಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ನನ್ನ ಪೂರ್ತಿ ದೇಹವನ್ನು ನೋಡದ ಹೊರತು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ' ಎಂದಿದ್ದರು.

'ಈ ಜನರು ಕೇವಲ ಮಾಧ್ಯಮದ ಗಮನಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ನಾನು ಮುಂಬೈನಲ್ಲಿ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಳ್ಳಸಾಗಣೆಯನ್ನು ವಿರೋಧಿಸಿದೆ. ಆದರೂ, ಅದಿನ್ನು ತುಂಬಾ ಇದೆ. ಮುಂಬೈನಲ್ಲಿ ಮತ್ತೆ ಎಲ್ಲೆಡೆ ಇರುವ ಅಕ್ರಮ ಡ್ಯಾನ್ಸ್ ಬಾರ್‌ಗಳು ಮತ್ತು ವೇಶ್ಯಾವಾಟಿಕೆಯನ್ನು ಮುಚ್ಚುವುದು ಹೇಗೆ? ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com