ಜನವರಿ 25ಕ್ಕೆ ಪಠಾಣ್ ರಿಲೀಸ್: ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ ಶಾರುಖ್ ಖಾನ್!
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿಮಾನಿಗಳು ನಾಲ್ಕು ವರ್ಷಗಳ ಕಾಯುವಿಕೆಯ ನಂತರ ತನ್ನ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ.
Published: 23rd January 2023 12:19 AM | Last Updated: 23rd January 2023 01:55 PM | A+A A-

ಶಾರುಖ್ ಖಾನ್
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿಮಾನಿಗಳು ನಾಲ್ಕು ವರ್ಷಗಳ ಕಾಯುವಿಕೆಯ ನಂತರ ತನ್ನ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ.
ಪಠಾಣ್ ಚಿತ್ರ ಬಿಡುಗಡೆಗೆ ಇನ್ನೇರಡು ದಿನ ಇರುವಂತೆಯೇ, ಸೂಪರ್ ಸ್ಟಾರ್ ಭಾನುವಾರ ಸಂಜೆ ತಮ್ಮ ಮನೆ ಮೇಲಿಂದ ಶುಭಾಶಯ ಹೇಳುವ ಮೂಲಕ ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು. ಶಾರೂಖ್ ಖಾನ್ ಅವರ ಸಹಸ್ರಾರು ಅಭಿಮಾನಿಗಳು ಅವರ ಮನೆಯ ಹೊರಗೆ ಜಮಾಯಿಸಿದರು ಮತ್ತು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಶಾರುಖ್ ಖಾನ್, ಮನೆ ಮುಂದೆ ಜಮಾಯಿಸಿದ್ದ ಜನರ ಮಧ್ಯೆ ಕೆಂಪು ಕಾರು ಹೇಗೆ ಸಿಲುಕಿಕೊಂಡಿತು ಎಂಬುದರ ಕುರಿತು ಹಾಸ್ಯದ ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪಠಾಣ್, ಜನವರಿ 25 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.