ಪಠಾಣ್ ಸಿನಿಮಾಗೆ ಇಂಡಿಯನ್ ಪಠಾಣ್ ಅಂತ ಮರುನಾಮಕರಣ ಮಾಡ್ತಾರಂತೆ ಕಂಗನಾ, ಯಾಕೆ ಅಂದರೆ...
ನಟಿ ಕಂಗಣಾ ರನೌತ್, ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ್ದು ತಾವು ಆ ಸಿನಿಮಾಗೆ ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.
Published: 27th January 2023 01:09 PM | Last Updated: 27th January 2023 05:50 PM | A+A A-

ಕಂಗನಾ ರನೌತ್
ಮುಂಬೈ: ನಟಿ ಕಂಗಣಾ ರನೌತ್, ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ್ದು ತಾವು ಆ ಸಿನಿಮಾಗೆ ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.
ಟ್ವಿಟರ್ ಹ್ಯಾಂಡಲ್ ನಲ್ಲಿ ಬರೆದಿರುವ ಕಂಗನಾ, ಸಿನಿಮಾವನ್ನು ದ್ವೇಷದ ಮೇಲೆ ಪ್ರೀತಿಯ ಗೆಲುವು ಎಂದು ಹೇಳುತ್ತಿರುವವರಿಗೆ ಕೇಳುತ್ತೇನೆ, ಯಾರ ಪ್ರೀತಿಯ ಮೇಲೆ ಯಾರ ಗೆಲುವು? ಯಾರು ಟಿಕೆಟ್ ಖರೀದಿಸಿ ಸಿನಿಮಾವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾಗಿರೋಣ.
ಹೌದು, ಇದು ಶೇ.80 ರಷ್ಟು ಹಿಂದೂಗಳು ಜೀವಿಸುತ್ತಿರುವ ಆದರೂ ಪಠಾಣ್ ಅಂತಹ ಸಿನಿಮಾ ಬಂದಿರುವುದು ಭಾರತದ ಪ್ರೀತಿ ಹಾಗೂ ಸಮಗ್ರತೆ ಎಂದು ಕಂಗಣಾ ಹೇಳಿದ್ದಾರೆ.
ಇದನ್ನೂ ಓದಿ: ಬಿಡುಗಡೆಯಾದ ಮೊದಲ ದಿನವೇ ರೂ.100 ಕೋಟಿ ಬಾಚಿದ ಪಠಾಣ್: ಶಾರುಖ್ ಪ್ರಶಂಸಿಸಿದ ಕರಣ್ ಜೋಹರ್
ಅಷ್ಟೇ ಅಲ್ಲದೇ ಪಠಾಣ್ ಸಿನಿಮಾವನ್ನು ತಾವು ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿರುವ ಕಂಗನಾ, ಅದಕ್ಕೆ ಕಾರಣವನ್ನೂ ನೀಡಿದ್ದು, ಭಾರತೀಯ ಮುಸ್ಲಿಮರು ದೇಶಭಕ್ತರು ಹಾಗೂ ಅಫ್ಘಾನ್ ನ ಪಠಾಣರಿಗಿಂತಲೂ ಭಿನ್ನರಾಗಿರುವವರು ಎಂದು ಹೇಳಿದ್ದಾರೆ.
ನಮ್ಮ ಶತ್ರು ದೇಶ ಪಾಕಿಸ್ತಾನ ಹಾಗೂ ಐಎಸ್ಐಎಸ್ ನ್ನು ಒಳ್ಳೆಯ ರೀತಿಯಲ್ಲಿ ತೋರಿಸಿರುವ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇದು ದ್ವೇಷ ಹಾಗೂ ನಿರ್ಣಯಗಳನ್ನೂ ಮೀರಿದ ಭಾರತದ ಆತ್ಮವಾಗಿದೆ ಇದೇ ಭಾರತವನ್ನು ಶ್ರೇಷ್ಠವಾಗಿರಿಸಿದೆ. ಇದು ಶತ್ರುಗಳ ಸಣ್ಣ ರಾಜಕೀಯ ಹಾಗೂ ದ್ವೇಷದ ವಿರುದ್ಧ ಭಾರತದ ಪ್ರೀತಿಯ ಗೆಲುವಾಗಿದೆ. ಇದನ್ನು ಅತಿಯಾದ ನಿರೀಕ್ಷೆಗಳಿಟ್ಟುಕೊಂಡಿರುವವರು ಗಮನಿಸಬೇಕು ಎಂದು ಕಂಗನಾ ಹೇಳಿದ್ದಾರೆ.
I do believe Indian Muslims are patriotic and very different from Afghan Pathans … the crux is India will never be Afghanistan, we all know what is happening in Afghanistan,it’s beyond hell there, so apt name for the movie Pathan according to its storyline is the Indian Pathan