ಮುಂಬೈ: ಫ್ಯಾಶನ್ ಡಿಸೈನರ್ ಮಸಾಬ ಗುಪ್ತಾ ಮತ್ತು ನಟ ಸತ್ಯದೀಪ್ ಮಿಶ್ರಾ ವಿವಾಹ ಬಂಧನಕ್ಕೊಳಗಾಗಿದ್ದಾರೆ.
33 ವರ್ಷದ ಫ್ಯಾಷನ್ ಡಿಸೈನರ್ ಹಾಗೂ ನಟಿಯಾಗಿರುವ ಮಸಾಬ ಗುಪ್ತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ನನ್ನ ಶಾಂತ ಸಾಗರವನ್ನು ಮದುವೆಯಾಗಿದ್ದೇನೆ. ಅನೇಕ ಜೀವಿತಾವಧಿಯ ಪ್ರೀತಿ, ಶಾಂತಿ, ಸ್ಥಿರತೆ ಮತ್ತು ಮುಖ್ಯವಾಗಿ ನಗು ಇಲ್ಲಿದೆ. ನನ್ನ ಸಂಗಾತಿಯನ್ನು ಆಯ್ಕೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಮಸಾಬಾ ಗುಪ್ತಾ ಬರೆದುಕೊಂಡಿದ್ದಾರೆ.
ಸತ್ಯದೀಪ್ ಮಿಶ್ರಾ "ನೋ ಒನ್ ಕಿಲ್ಡ್ ಜೆಸ್ಸಿಕಾ" ಮತ್ತು "ಬಾಂಬೆ ವೆಲ್ವೆಟ್" ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಜೋನಾಸ್, ವಿಕ್ಕಿ ಕೌಶಲ್, ಆಯುಷ್ಮಾನ್ ಖುರಾನಾ, ಅನಿಲ್ ಕಪೂರ್, ಭೂಮಿ ಪೆಡ್ನೇಕರ್, ಜೋಯಾ ಅಖ್ತರ್, ಕೊಂಕಣ ಸೆಂಶರ್ಮಾ ಮತ್ತು ಅನನ್ಯ ಪಾಂಡೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನವವಿವಾಹಿತ ದಂಪತಿಗಳಿಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ.
ಫಾಲೋ-ಅಪ್ ಪೋಸ್ಟ್‌ನಲ್ಲಿ, ಮಸಾಬಾ ಗುಪ್ತಾ ತಂದೆ, ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್ ಮತ್ತು ತಾಯಿ ನೀನಾ ಗುಪ್ತಾ ಅವರೊಂದಿಗಿನ ಕುಟುಂಬದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಮೊದಲ ಬಾರಿಗೆ - ನನ್ನ ಇಡೀ ಜೀವನ ಒಟ್ಟಿಗೆ ಬಂದಿತು. ಇದು ನಾವು. ನನ್ನ ಸುಂದರ ಕುಟುಂಬ. ಇಲ್ಲಿಂದ ಎಲ್ಲವೂ ಕೇವಲ ಬೋನಸ್" ಎಂದು ಬರೆದು ನೀನಾ ಗುಪ್ತಾ ಕೂಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಮಗಳು ಇಂದು ಮದುವೆಯಾಗಿದ್ದಾಳೆ, ಹೃದಯವು ಸಂತೋಷ, ಕೃತಜ್ಞತೆ ಮತ್ತು ಪ್ರೀತಿಯಿಂದ ತುಂಬಿದೆ, ಎಂದು ಬರೆದುಕೊಂಡಿದ್ದಾರೆ. ಮಸಾಬ ಗುಪ್ತಾ ಈ ಹಿಂದೆ ನಿರ್ಮಾಪಕ ಮಧು ಮಂಟೆನಾ ಅವರನ್ನು ಮದುವೆಯಾಗಿದ್ದರು. 2015ರಲ್ಲಿ ಮದುವೆಯಾಗಿ 2019ರಲ್ಲಿ ವಿಚ್ಛೇದನ ಪಡೆದಿದ್ದರು.
ಇನ್ನು ಸತ್ಯದೀಪ್ ಮಿಶ್ರಾ ಈ ಹಿಂದೆ ಅದಿತಿ ರಾವ್ ಹೈದರಿ ಅವರನ್ನು ವಿವಾಹವಾಗಿದ್ದರು. 2013 ರಲ್ಲಿ ವಿಚ್ಛೇದನ ಪಡೆದಿದ್ದರು.
Advertisement