ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 'ಪಠಾಣ್' ಭರ್ಜರಿ ಕಲೆಕ್ಷನ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಒಂದು ಸಾಧನೆ ನಂತರ ಮತ್ತೊಂದು ಮೈಲಿಗಲ್ಲನ್ನು ಸಾಧಿಸುತ್ತಲೇ ಇದೆ. ಚಿತ್ರವು ತನ್ನ ಆರಂಭಿಕ ದಿನಗಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಕಂಡ ನಂತರ, ಒಂದು ವಾರದೊಳಗೆ ಜಾಗತಿಕವಾಗಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ.
Published: 29th January 2023 04:44 PM | Last Updated: 30th January 2023 05:29 PM | A+A A-

ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ಶಾರೂಕ್ ಖಾನ್, ದೀಪಿಕಾ ಪಡುಕೋಣೆ
ಮುಂಬೈ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಒಂದು ಸಾಧನೆ ನಂತರ ಮತ್ತೊಂದು ಮೈಲಿಗಲ್ಲನ್ನು ಸಾಧಿಸುತ್ತಲೇ ಇದೆ. ಚಿತ್ರವು ತನ್ನ ಆರಂಭಿಕ ದಿನಗಲ್ಲಿ 100 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಕಂಡ ನಂತರ, ಒಂದು ವಾರದೊಳಗೆ ಜಾಗತಿಕವಾಗಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ.
ಶಾರುಖ್ ಖಾನ್ ಅವರ ಈ ಚಿತ್ರವು ತೆರೆಕಂಡಾಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 107 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿತ್ತು. ಇದೀಗ ಬಿಡುಗಡೆಯಾದ ನಾಲ್ಕು ದಿನಗಳಲ್ಲಿಯೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ. ಗಳಿಸಿದೆ.
ಜನವರಿ 25ರಂದು ತೆರೆ ಕಂಡ ಚಿತ್ರ, ಇದೀಗ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ಮೂಲಕ ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್‌ಗೆ ಸೇರಿದ ಬಾಲಿವುಡ್ ಚಲನಚಿತ್ರವಾಗಿದೆ.
‘PATHAAN’: ₹ 429 CR WORLDWIDE *GROSS* IN 4 DAYS… #Pathaan WORLDWIDE [#India + #Overseas] *Gross* BOC… *4 days*…
— taran adarsh (@taran_adarsh) January 29, 2023
#India: ₹ 265 cr
#Overseas: ₹ 164 cr
Worldwide Total *GROSS*: ₹ 429 cr
pic.twitter.com/Qd8xriCFvX
ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಪಠಾಣ್ ಸಿನಿಮಾ ನಾಲ್ಕು ದಿನಗಳಲ್ಲಿ 429 ಕೋಟಿ ರೂಪಾಯಿ ಗಳಿಸಿದೆ. ಈ ಪೈಕಿ ಭಾರತದಲ್ಲಿ 265 ಕೋಟಿ ರೂ. ಮತ್ತು ಜಾಗತಿಕವಾಗಿ 164 ಕೋಟಿ ರೂ. ಗಳಿಸಿದೆ ಓವರ್‌ಸೀಸ್‌ನಲ್ಲಿ 112 ಕೋಟಿ ರೂಪಾಯಿ, ಒಟ್ಟಾರೆ 429 ಕೋಟಿ ಎಂದು ಹೇಳಿದ್ದಾರೆ.