ಬಾಲಿವುಡ್ ಬ್ಲಾಕ್‌ಬಸ್ಟರ್ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರಕ್ಕೆ 24 ವರ್ಷದ ಸಂಭ್ರಮ!
ಸಂಜಯ್ ಲೀಲಾ ಬನ್ಸಾಲಿಯವರ ಬ್ಲಾಕ್‌ಬಸ್ಟರ್ 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾ ಬಂದು ಇಂದಿಗೆ 24 ವರ್ಷಗಳು. ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Published: 18th June 2023 01:24 PM | Last Updated: 18th June 2023 01:24 PM | A+A A-

ಹಮ್ ದಿಲ್ ದೇ ಚುಕೇ ಸನಮ್
ಮುಂಬೈ: ಸಂಜಯ್ ಲೀಲಾ ಬನ್ಸಾಲಿಯವರ ಬ್ಲಾಕ್‌ಬಸ್ಟರ್ 'ಹಮ್ ದಿಲ್ ದೇ ಚುಕೇ ಸನಮ್' ಸಿನಿಮಾ ಬಂದು ಇಂದಿಗೆ 24 ವರ್ಷಗಳು. ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್, ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು 24 ವರ್ಷಗಳನ್ನು ಪೂರೈಸುತ್ತಿದ್ದಂತೆ, ಬನ್ಸಾಲಿ ಪ್ರೊಡಕ್ಷನ್ಸ್ ಚಿತ್ರದ ದೃಶ್ಯಗಳನ್ನು ಒಳಗೊಂಡ ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿದೆ.
'ಅವರ ಹಣೆಬರಹಗಳು ತೆರೆದುಕೊಳ್ಳುತ್ತಿದ್ದಂತೆ, ಪ್ರೀತಿಯ ನಿರಂತರ ಶಕ್ತಿಯು ಮೇಲುಗೈ ಸಾಧಿಸುತ್ತದೆ... ಈ ಕಾಲಾತೀತ ಕಥೆಗೆ 24 ವರ್ಷಗಳ ಸಂಭ್ರಮಾಚರಣೆ. 24YearsOfHumDilDeChukeSanam' ಎಂಬ ಪೋಸ್ಟ್ ಅನ್ನು ಬನ್ಸಾಲಿ ಪ್ರೊಡಕ್ಷನ್ಸ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
1999ರಲ್ಲಿ ಬಿಡುಗಡೆಯಾದ ಐಕಾನಿಕ್ ಸಿನಿಮಾವು ನವವಿವಾಹಿತ ವನರಾಜ್ (ಅಜಯ್) ನ ಕಥೆಯನ್ನು ವಿವರಿಸುತ್ತದೆ. ಆತನಿಗೆ ತನ್ನ ಹೆಂಡತಿ ನಂದಿನಿ (ಐಶ್ವರ್ಯಾ) ಇನ್ನೊಬ್ಬ ವ್ಯಕ್ತಿ ಸಮೀರ್ (ಸಲ್ಮಾನ್) ನನ್ನು ಪ್ರೀತಿಸುತ್ತಿರುವುದು ತಿಳಿಯುತ್ತದೆ ಮತ್ತು ಅವರನ್ನು ಒಂದುಗೂಡಿಸಲು ನಿರ್ಧರಿಸುತ್ತಾನೆ. ಆದಾಗ್ಯೂ, ನಂದಿನಿ ಮನಸ್ಸು ಬದಲಾಯಿಸಿದಾಗ ಮತ್ತು ಸಮೀರ್‌ನೊಂದಿಗೆ ಓಡಿಹೋಗುವ ಬದಲು ವನರಾಜ್ (ಅಜಯ್) ಜೊತೆ ಇರಲು ನಿರ್ಧರಿಸಿದಾಗ ಕಥೆಯು ತಿರುವು ಪಡೆಯಿತು.
'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಸಂಗೀತವು ವಿಶೇಷವಾಗಿದೆ. ಪ್ರತಿ ಹಾಡು ಹಿಟ್ ಆಯಿತು ಮತ್ತು ಸಂಗೀತ ಪ್ರೇಮಿಗಳಿಂದ ಇಂದಿಗೂ ಕೇಳಲ್ಪಡುತ್ತಿವೆ.
'ಹಮ್ ದಿಲ್ ದೇ ಚುಕೆ ಸನಮ್' ಚಿತ್ರವು ಸಂಗೀತ, ನೃತ್ಯ ಸಂಯೋಜನೆ, ಛಾಯಾಗ್ರಹಣ ಮತ್ತು ನಿರ್ಮಾಣ ವಿನ್ಯಾಸಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.