ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ 'ಪಠಾಣ್'; 1 ಸಾವಿರ ಕೋಟಿ ರೂ. ಕಲೆಕ್ಷನ್
ಭಾರತದಲ್ಲಿ ಸಾರ್ವಕಾಲಿಕ ನಂಬರ್ ಒನ್ ಹಿಂದಿ ಚಲನಚಿತ್ರವಾದ ಬೇಹುಗಾರಿಕೆ ಥ್ರಿಲ್ಲರ್ 'ಪಠಾಣ್' ಸಿನಿಮಾ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ ಎಂದು ಚಿತ್ರತಂಡ ಬುಧವಾರ ತಿಳಿಸಿದ್ದಾರೆ.
Published: 16th March 2023 12:26 PM | Last Updated: 04th April 2023 11:23 AM | A+A A-

ಪಠಾಣ್ ಚಿತ್ರದ ಫೋಸ್ಟರ್
ಮುಂಬೈ: ಭಾರತದಲ್ಲಿ ಸಾರ್ವಕಾಲಿಕ ನಂಬರ್ ಒನ್ ಹಿಂದಿ ಚಲನಚಿತ್ರವಾದ ಬೇಹುಗಾರಿಕೆ ಥ್ರಿಲ್ಲರ್ 'ಪಠಾಣ್' ಸಿನಿಮಾ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ ಎಂದು ಚಿತ್ರತಂಡ ಬುಧವಾರ ತಿಳಿಸಿದ್ದಾರೆ.
ಶಾರುಖ್ ಖಾನ್ ಅವರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಶ್ವಾದಾದ್ಯಂತ 1,000 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ನಿರ್ಮಿಸಿದ 'ಪಠಾನ್' ಸಿನಿಮಾದಲ್ಲಿ ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸಹ ನಟಿಸಿದ್ದಾರೆ.
ವೈಆರ್‌ಎಫ್ ವಿತರಣಾ ವಿಭಾಗದ ಉಪಾಧ್ಯಕ್ಷ ರೋಹನ್ ಮಲ್ಹೋತ್ರಾ ಅವರು ಚಿತ್ರಮಂದಿರಗಳಲ್ಲಿ 50 ದಿನಗಳ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ವಿಶ್ವದಾದ್ಯಂತದ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.
ವೈಆರ್‌ಎಫ್‌ನಿಂದ ನಮ್ಮ ಇತ್ತೀಚಿನ ಕೊಡುಗೆಯಾದ 'ಪಠಾನ್' ಸಿನಿಮಾ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ನಮ್ಮ ಚಿತ್ರಕ್ಕೆ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಕ್ಕಾಗಿ ನಾವು ಪ್ರಪಂಚದಾದ್ಯಂತ ಇರುವ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇವೆ' ಎಂದಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನ ಎಲ್ಲಾ ದಾಖಲೆ ಧೂಳಿಪಟ ಮಾಡಿದ 'ಪಠಾಣ್'
'ಪಠಾಣ್' ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ನೋಡಿದರೆ, ಪ್ರೇಕ್ಷಕರಿಗೆ ಸಿನಿಮಾದಲ್ಲಿ ಹಿಂದೆಂದೂ ಕಂಡಿರದ ಅನುಭವವನ್ನು ನೀಡುವ ಭರವಸೆಯನ್ನು ನೀಡಿದರೆ ಅಂತಹ ಸಿನಿಮಾವನ್ನು ಬೆಂಬಲಿಸುತ್ತಾರೆ ಎಂಬುದರ ಸಂಕೇತವಾಗಿದೆ. ನಾವು ಅವರಿಗೆ ಅಂತಹ ಚಿತ್ರವನ್ನು ನೀಡಬಹುದೆಂದು ನಾವು ಸಂತೋಷಪಡುತ್ತೇವೆ' ಎಂದು ಮಲ್ಹೋತ್ರಾ ಹೇಳಿದರು.
ಭಯೋತ್ಪಾದಕ ಗುಂಪೊಂದು ಭಾರತದ ಮೇಲೆ ದಾಳಿಯನ್ನು ಪ್ರಾರಂಭಿಸುವುದನ್ನು ತಡೆಯಲು ದೇಶಭ್ರಷ್ಟತೆಯಿಂದ ಹೊರಬರುವ ನಾಮಸೂಚಕ ಗೂಢಚಾರನ (ಶಾರುಖ್) ಕಥೆಯನ್ನು ಪಠಾಣ್ ಒಳಗೊಂಡಿದೆ.
ಇದು ಸಲ್ಮಾನ್ ಖಾನ್ ಅವರ 'ಏಕ್ ಥಾ ಟೈಗರ್' ಮತ್ತು 'ಟೈಗರ್ ಜಿಂದಾ ಹೈ' ಮತ್ತು ಹೃತಿಕ್ ರೋಷನ್ ಅವರ 'ವಾರ್' ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ನಾಲ್ಕನೇ ಗೂಢಚಾರಿಕೆ ಚಿತ್ರವಾಗಿದೆ.