ನಾಗಬಾಬು ಪುತ್ರಿ ದಾಂಪತ್ಯದಲ್ಲಿ ಬಿರುಕು: ಪತಿ ಚೈತನ್ಯ ಇನ್‌ಸ್ಟಾಗ್ರಾಮ್ ಅನ್‌ಫಾಲೋ ಮಾಡಿದ ನಿಹಾರಿಕಾ
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ನಿಹಾರಿಕಾ ಕೊನಿಡೇಲಾ-ಚೈತನ್ಯ ಜೆವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬುದಾಗಿ ವರದಿಯಾಗುತ್ತಿದೆ.
Published: 20th March 2023 06:54 PM | Last Updated: 20th March 2023 07:00 PM | A+A A-

ನಿಹಾರಿಕಾ-ಚಿರಂಜೀವಿ-ಚೈತನ್ಯ
ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ನಿಹಾರಿಕಾ ಕೊನಿಡೇಲಾ-ಚೈತನ್ಯ ಜೆವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬುದಾಗಿ ವರದಿಯಾಗುತ್ತಿದೆ.
2020ರಲ್ಲಿ ಚೈತನ್ಯ ಜೆವಿ ಅವರನ್ನು ವಿವಾಹವಾದ ನಿಹಾರಿಕಾ ಕೊನಿಡೇಲಾ ಮುಂದಿನ ದಿನಗಳಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆಯಬಹುದು. ಇದಕ್ಕೆ ಪುಷ್ಠಿ ಎಂಬಂತೆ ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದರಿಂದಾಗಿ ಅವರ ವಿಚ್ಛೇದನದ ಚರ್ಚೆ ತೀವ್ರಗೊಂಡಿದೆ.
ಮದುವೆಯಾಗಿ 3 ವರ್ಷ ಕಳೆದರೂ ಈಗ ನಿಹಾರಿಕಾ ಕೊನಿಡೇಲಾ ಮತ್ತು ಚೈತನ್ಯ ಜೆವಿ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿ ಹೋಗುತ್ತಿಲ್ಲ. ಈ ಹಿಂದೆಯೂ ಈ ಜೋಡಿಯ ನಡುವೆ ಪರಸ್ಪರ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿ ನಿರಂತರವಾಗಿ ಮುನ್ನೆಲೆಗೆ ಬರುತ್ತಿತ್ತು. ಏತನ್ಮಧ್ಯೆ, ನಿಹಾರಿಕಾ ಕೊನಿಡೇಲಾ ತನ್ನ ಪತಿ ಚೈತನ್ಯ ಅವರನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಅಷ್ಟೇ ಅಲ್ಲ, ಚೈತನ್ಯ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ನಿಹಾರಿಕಾ ಕೊನಿಡೇಲಾ ಅವರೊಂದಿಗಿನ ಮದುವೆಯ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದಾರೆ.
ಇದನ್ನೂ ನೋಡಿ: ನಾಗಬಾಬು ಪುತ್ರಿ ಮದುವೆಯಲ್ಲಿ 'ಮೆಗಾ' ಫ್ಯಾಮಿಲಿ ಭಾಗಿ!
ಇದರಿಂದಾಗಿ ನಿಹಾರಿಕಾ ಕೊನಿಡೇಲಾ ಮತ್ತು ಚೈತನ್ಯ ಜೆವಿ ಅವರ ಮದುವೆ ಶೀಘ್ರದಲ್ಲೇ ಮುರಿದು ಬೀಳಲಿದೆ ಎಂದು ನೆಟಿಜನ್‌ಗಳು ಊಹಿಸುತ್ತಿದ್ದಾರೆ.
ಸೂಪರ್‌ಸ್ಟಾರ್ ಚಿರಂಜೀವಿ ಅವರ ಸೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಿಹಾರಿಕಾ ಕೊನಿಡೇಲಾ ಅವರ ಚಲನಚಿತ್ರ ಜೀವನದಲ್ಲಿ 'ಒಕ ಮನಸು ಮತ್ತು ಮುದಪ್ಪು ಅವಕೈ ಮತ್ತು ಸೂರ್ಯಕಾಂತ್' ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ, ನಿಹಾರಿಕಾ ಅವರ ಈ ಚಿತ್ರಗಳು ಹೆಚ್ಚು ಸದ್ದು ಮಾಡಿರಲಿಲ್ಲ.