ಇತ್ತೀಚಿಗೆ ತೆರೆಕಂಡ ಕಂಗನಾ ಅಭಿನಯದ ಬಹುನಿರೀಕ್ಷಿತ ದೇಶಭಕ್ತಿ ಆಧರಿತ ತೇಜಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನ ರೂ. 1.25 ಕೋಟಿ ಕಲೆಕ್ಷನ್ ಮಾಡಿದರೆ, ಎರಡನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿ ಒಟ್ಟಾರೇ ರೂ. 2.5 ಕೋಟಿ ಗಳಿಸಿದೆ. ಇದರಿಂದ ಕಂಗಳಾದ ಕಂಗನಾ, ಸಿನಿಮಾ ವೀಕ್ಷಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಹಿಂದಿ ಚಿತ್ರಗಳನ್ನು ನೋಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್, ಭಾರತಕ್ಕೆ ಇತ್ತೀಚೆಗಷ್ಟೇ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ದಯವಿಟ್ಟು ನಿರೀಕ್ಷಿಸಿ. ಅದು ಪಿಕಪ್ ಆಗುತ್ತದೆ ಎಂದು ಹೇಳುವ ಮೂಲಕ ಕಂಗನಾ ಅವರ ಕಾಲೆಳೆದಿದ್ದಾರೆ.
ಮತ್ತೊಂದೆಡೆ ತೇಜಸ್ ಚಿತ್ರ ಕುರಿತು ಅಪಹಾಸ್ಯ ಮಾಡಿರುವ ಬಾಲಿವುಡ್ ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್, ಕಂಗನಾ ದೀದಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮುಂದಿನ ಸಲ ನಿಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಡಿ. ಈ ಬಾಲಿವುಡ್ ನವರು ನಿಮ್ಮನ್ನು ಬಿಡುವುದಿಲ್ಲ ಎಂದಿದ್ದಾರೆ.
ಗದರ್, ಪಠಾಣ್, ಜವಾನ್ ಸಿನಿಮಾದ ಎಲ್ಲಾ ರೆಕಾರ್ಡ್ ಗಳನ್ನು ತೇಜಸ್ ಸಿನಿಮಾ ಮುರಿಯಬೇಕಿತ್ತು. ಆದರೆ, ತೇಜಸ್ ಸಿನಿಮಾ ಲೈಫ್ ಟೈಮ್ ಗಳಿಕೆಯೇ 2 ಕೋಟಿಯಷ್ಟು ಎಂದು ವ್ಯಂಗ್ಯವಾಡಿದ್ದಾರೆ.
Advertisement