'ಟೈಗರ್ 3' ಮೊದಲ ಪೋಸ್ಟರ್ ಶೇರ್ ಮಾಡಿದ ಸಲ್ಮಾನ್ ಖಾನ್, ದೀಪಾವಳಿಗೆ ಬಿಡುಗಡೆ ಖಚಿತ

ಯಶ್ ರಾಜ್ ಫಿಲ್ಮಿಂನ ಸ್ಪೈ ಯೂನಿವರ್ಸ್‌ನ ಐದನೇ ಚಿತ್ರವಾದ ಟೈಗರ್ 3 ಮೊದಲ ಪೋಸ್ಟರ್ ನ್ನು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಶನಿವಾರ ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ಯಶ್ ರಾಜ್ ಫಿಲ್ಮಿಂನ ಸ್ಪೈ ಯೂನಿವರ್ಸ್‌ನ ಐದನೇ ಚಿತ್ರವಾದ ಟೈಗರ್ 3 ಮೊದಲ ಪೋಸ್ಟರ್ ನ್ನು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಶನಿವಾರ ಹಂಚಿಕೊಂಡಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ  ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಗೂಢಚಾರಿಕೆ ಏಜೆಂಟ್‌ಗಳಾಗಿ ಮರಳುತ್ತಿದ್ದಾರೆ.

ಏಕ್ ಥಾ ಟೈಗರ್ (2012) ಮತ್ತು ಟೈಗರ್ ಜಿಂದಾ ಹೈ (2017) ನಂತರ ಬರುತ್ತಿರುವ ಟೈಗರ್-3 ಚಿತ್ರ ನವೆಂಬರ್‌ನಲ್ಲಿ ದೀಪಾವಳಿಯಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ. ಈ ಚಿತ್ರದ ಮೊದಲ
ಪೋಸ್ಟರ್ ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.

ಚೋಪ್ರಾರ ಪರಿಕಲ್ಪನೆಯಾದ 'YRF ಸ್ಪೈ ಯೂನಿವರ್ಸ್ ಅಡಿ ಸಲ್ಮಾನ್‌ ಖಾನ್ ನ "ಟೈಗರ್" ಶಾರುಖ್‌ ಖಾನ್ ನ ಪಠಾನ್ ಮತ್ತು ಹೃತಿಕ್ ರೋಷನ್‌ ಅವರ ವಾರ್  ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. ಸಲ್ಮಾನ್ ಖಾನ್ ಅತಿಥಿ ಪಾತ್ರದೊಂದಿಗೆ 
ಈ ಸ್ಟುಡಿಯೋ ಇತ್ತೀಚಿಗೆ ನಿರ್ಮಿಸಿದ ಬ್ಲಾಕ್‌ಬಸ್ಟರ್ ಪಠಾಣ್ ಚಿತ್ರ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com