ಕಿಂಗ್ ಖಾನ್ ಈಗ ಬಾಕ್ಸ್ ಆಫೀಸ್ ಕಿಂಗ್: ಎರಡೇ ದಿನಕ್ಕೆ 240 ಕೋಟಿ ಗಳಿಸಿದ 'ಜವಾನ್'

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಜವಾನ್ ಚಿತ್ರ ಬಿಡುಗಡೆಯಾಗಿ ಎರಡೇ ದಿನಕ್ಕೆ ವಿಶ್ವದಾದ್ಯಂತ 240.47 ಕೋಟಿ ರೂಪಾಯಿ ಗಳಿಸಿದೆ...
ಜವಾನ್ ಪೋಸ್ಟರ್ ಜೊತೆ ಅಭಿಮಾನಿ ಪೋಸ್
ಜವಾನ್ ಪೋಸ್ಟರ್ ಜೊತೆ ಅಭಿಮಾನಿ ಪೋಸ್

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಜವಾನ್ ಚಿತ್ರ ಬಿಡುಗಡೆಯಾಗಿ ಎರಡೇ ದಿನಕ್ಕೆ ವಿಶ್ವದಾದ್ಯಂತ 240.47 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.

ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನದ ಪ್ಯಾನ್-ಇಂಡಿಯಾ ಚಿತ್ರ ಜವಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಹಾಗೂ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

"ಕೇವಲ 2 ದಿನಗಳಲ್ಲಿ ಜವಾನ್ ಚಿತ್ರ ರೂ 240. 47 ಕೋಟಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ" ಎಂದು ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೆಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪೋಸ್ಟ್ ಮಾಡಿದೆ.

ಚಿತ್ರವು ಮೊದಲ ದಿನದಲ್ಲಿ ವಿಶ್ವಾದ್ಯಂತ ರೂ 129.6 ಕೋಟಿ ಸಂಗ್ರಹಿಸಿತ್ತು. ಇದು ಜಾಗತಿಕವಾಗಿ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಕಲೆಕ್ಷೆನ್ ಆಗಿದೆ. ಇಂದು ವಿಶ್ವಾದ್ಯಂತ 110.87 ರೂ. ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com