
ಹಾಸ್ಯನಟ-ನಟ ಕಪಿಲ್ ಶರ್ಮಾ ತಮ್ಮ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಲ್ಲಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಬಣ್ಣದ ಕುರಿತಂತೆ ಕಮೆಂಟ್ ಮಾಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಕಪಿಲ್ ಶರ್ಮಾ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬೇಬಿ ಜಾನ್ ಚಿತ್ರತಂಡ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ನಲ್ಲಿ ಕಾಣಿಸಿಕೊಂಡಿತು. ಬಾಲಿವುಡ್ ನಟ ವರುಣ್ ಧವನ್, ಕೀರ್ತಿ ಸುರೇಶ್, ವಾಮಿಕಾ ಗಬ್ಬಿ ಮತ್ತು ಚಿತ್ರದ ಸಹ-ನಿರ್ಮಾಪಕ ಅಟ್ಲೀ ಸಹ ಇದ್ದರು. ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದ ಯಶಸ್ಸಿನ ನಂತರ ಅಟ್ಲೀ ಹೇಗೆ ದೊಡ್ಡ ನಿರ್ದೇಶಕ ಮತ್ತು ನಿರ್ಮಾಪಕರಾದರು ಎಂದು ಕಾರ್ಯಕ್ರಮದ ಸಮಯದಲ್ಲಿ ಕಪಿಲ್ ಹೇಳಿದರು. ನೀವು ಮೊದಲ ಬಾರಿಗೆ ಒಬ್ಬ ಸ್ಟಾರ್ ಅನ್ನು ಭೇಟಿಯಾದಾಗ, ಅವರು ಅಟ್ಲಿ ಎಲ್ಲಿದ್ದಾರೆ (Where Is Atlee) ಎಂದು ಕೇಳುತ್ತಾರೆಯೇ? ಎಂದು ಕೇಳಿದರು.
ಆ ಕ್ಷಣವನ್ನು ಸೂಕ್ಷ್ಮವಾಗಿ ನಿಭಾಯಿಸಿದ ಅಟ್ಲಿ, ಖಡಕ್ ಆಗಿಯೇ ಹಾಸ್ಯನಟನಿಗೆ ತಿರುಗೇಟು ನೀಡಿದರು. 'ಒಂದು ರೀತಿಯಲ್ಲಿ, ನಾನು ನಿಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಿರ್ದೇಶಕ ಎಆರ್ ಮುರುಗದಾಸ್ ಸರ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವರು ನನ್ನ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅವರು ನನ್ನ ನಿರೂಪಣೆಯನ್ನು ಮೆಚ್ಚಿಕೊಂಡರೆ ಹೊರತು ನಾನು ಹೇಗೆ ಕಾಣುತ್ತಿದ್ದೇನೆ ಎಂದು ನೋಡಲಿಲ್ಲ, ಜಗತ್ತು ಇದನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮನ್ನು ಬಣ್ಣದಿಂದ ನಿರ್ಣಯಿಸಬಾರದು. ನಿಮ್ಮ ಹೃದಯದಿಂದ ನೀವು ನಿರ್ಣಯಿಸಬೇಕು ಎಂದು ತಿರುಗೇಟು ನೀಡಿದರು.
ಒಂದೆಡೆ, ಅಟ್ಲಿ ಅವರ ಉತ್ತರವು ಅಭಿಮಾನಿಗಳಿಂದ ಬಹಳ ಮೆಚ್ಚುಗೆ ಪಡೆದಿದೆ. ಕಪಿಲ್ ಶರ್ಮಾ ಅವರ ಪ್ರಶ್ನೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ, ಬಳಕೆದಾರರು ಅವರನ್ನು ಸಾಕಷ್ಟು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಅಟ್ಲೀ ಅವರ ಮೈಬಣ್ಣವನ್ನು ಗೇಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚಿನ್ಮಯಿ ಶ್ರೀಪಾದ ಅವರು ಕಪಿಲ್ ವಿರುದ್ಧ ವಾಗ್ದಾಳಿ ನಡೆಸಿದರು. ಕಪಿಲ್ ಹೇಳಿಕೆ 'ಮೂರ್ಖ ಮತ್ತು ಜನಾಂಗೀಯ' ನಿಂದನೆ ಎಂದು ಕರೆದಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ, 'ಕಾಮಿಡಿ' ಹೆಸರಿನಲ್ಲಿ ಕಪಿಲ್ ಬಣ್ಣದ ಬಗ್ಗೆ ಈ ಅಶ್ಲೀಲ ಮತ್ತು ಜನಾಂಗೀಯ ವ್ಯಂಗ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Advertisement