
ಮುಂಬೈ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಪಿಯಾ ಬೆನಗಲ್ ಅವರು ದೃಢಪಡಿಸಿದ್ದಾರೆ.
ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ 90 ವರ್ಷದ ಶ್ಯಾಮ್ ಬೆನಗಲ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 6:30ಕ್ಕೆ ನಿಧನರಾದರು ಎಂದು ಪುತ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಡಿಸೆಂಬರ್ 14 ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದರು. ನಟರಾದ ಕುಲಭೂಷಣ್ ಖರ್ಬಂದಾ, ನಾಸಿರುದ್ದೀನ್ ಶಾ, ದಿವ್ಯಾ ದತ್ತಾ, ಶಬಾನಾ ಅಜ್ಮಿ, ರಜಿತ್ ಕಪೂರ್, ಅತುಲ್ ತಿವಾರಿ, ಚಲನಚಿತ್ರ ನಿರ್ಮಾಪಕ-ನಟ ಮತ್ತು ಶಶಿ ಕಪೂರ್ ಅವರ ಪುತ್ರ ಕುನಾಲ್ ಕಪೂರ್ ಮತ್ತು ಇತರರು ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು.
ಮಂಥನ್' ಮತ್ತು 'ಜುಬೇದಾ' ಚಿತ್ರಗಳಿಂದ ಖ್ಯಾತಿ ಪಡೆದಿದ್ದ ಬೆನಗಲ್ ಅವರಿಗೆ 1976 ರಲ್ಲಿ ಪದ್ಮಶ್ರೀ ಮತ್ತು 1991 ರಲ್ಲಿ ಪದ್ಮಭೂಷಣ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.
Advertisement