
ಮುಂಬೈ: ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ರೊಮ್ಯಾಂಟಿಕ್ ಚಿತ್ರ 'ಯೆ ಜವಾನಿ ಹೈ ದಿವಾನಿ' ಮರು ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಜನವರಿ 3, 2025 ರಂದು.
ಈ ವರ್ಷದ ಆರಂಭದಲ್ಲಿ ಧರ್ಮ ಪ್ರೊಡಕ್ಷನ್ಸ್‌ನ 'ಕಲ್ ಹೋ ನಾ ಹೋ' ಮರು-ಬಿಡುಗಡೆಯ ಯಶಸ್ಸಿನ ನಂತರ, ದೊಡ್ಡ ಪರದೆಯ ಮೇಲೆ ಮತ್ತೆ 'ಯೆ ಜವಾನಿ ಹೈ ದಿವಾನಿ' ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿದ್ದು, ಮುಂದಿನ ವರ್ಷ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ.
ಈ ತಿಂಗಳ ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ 'ಯೆ ಜವಾನಿ ಹೈ ದಿವಾನಿ' ಕುರಿತು ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿತು. ಚಿತ್ರದ ಸೀಕ್ವೆಲ್ ನಿರ್ಮಾಣವಾಗಬಹುದು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.
ನಂತರ ಸೀಕ್ವೆಲ್ ಬದಲಿಗೆ 2013 ರಲ್ಲಿ ತೆರೆಕಂಡು ಹಿಟ್ ಆಗಿದ್ದ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿತು. ಹೊಸ ಪೀಳಿಗೆಯ ಪ್ರೇಕ್ಷಕರು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಈ ಐಕಾನಿಕ್ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದೆ.
'ಯೆ ಜವಾನಿ ಹೈ ದಿವಾನಿ' ರೊಮ್ಯಾಂಟಿಕ್ ಹಾಸ್ಯವನ್ನು ಒಳಗೊಂಡ ಚಿತ್ರವಾಗಿದ್ದು, ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದಲೂ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಕಲ್ಕಿ ಕೋಚ್ಲಿನ್ ಮತ್ತು ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement