'ದಂಗಲ್' ಚಿತ್ರದ ಜೂನಿಯರ್ ಬಬಿತಾ ಇನ್ನಿಲ್ಲ: 19ನೇ ವಯಸ್ಸಿಗೆ ನಟಿ ಸುಹಾನಿ ಭಟ್ನಾಗರ್ ವಿಧಿವಶ

ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಾಲ ಕಲಾವಿದೆ ಸುಹಾನಿ ಭಟ್ನಾಗರ್ ವಿಧಿವಶರಾಗಿದ್ದಾರೆ. 19ನೇ ವಯಸ್ಸಿನಲ್ಲಿ ಸುಹಾನಿ ಜಗತ್ತಿಗೆ ವಿದಾಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಾಲ ಕಲಾವಿದೆ ಸುಹಾನಿ ಭಟ್ನಾಗರ್ ವಿಧಿವಶರಾಗಿದ್ದಾರೆ. 19ನೇ ವಯಸ್ಸಿನಲ್ಲಿ ಸುಹಾನಿ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಸುಹಾನಿ ಫೆಬ್ರವರಿ 17ರ ಶನಿವಾರ ದೆಹಲಿಯಲ್ಲಿ ನಿಧನರಾದರು. ಅವರ ಮರಣದ ಸೂಕ್ತ ಕಾರಣ ತಿಳಿದುಬಂದಿಲ್ಲ. 'ದಂಗಲ್' ಚಿತ್ರದಲ್ಲಿ ಸುಹಾನಿ ಕಿರಿಯ ಬಬಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇಂಡಸ್ಟ್ರಿಯಲ್ಲಿ ಶೋಕದ ಅಲೆ ಎದ್ದಿದೆ.

'ದಂಗಲ್' ಚಿತ್ರದಲ್ಲಿ ಕಿರಿಯ ಬಬಿತಾ ಪಾತ್ರದಲ್ಲಿ ಸುಹಾನಿ ಭಟ್ನಾಗರ್ ಕಾಣಿಸಿಕೊಂಡಿದ್ದರು. ಅವರು ಅಮೀರ್ ಖಾನ್, ಸಾಕ್ಷಿ ತನ್ವರ್ ಮತ್ತು ಝೈರಾ ವಾಸಿಮ್ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡರು. ಸುಹಾನಿ ಅವರ ಅಭಿನಯಕ್ಕಾಗಿ ಪ್ರಶಂಸೆಯನ್ನೂ ಪಡೆದರು. 'ದಂಗಲ್' ನಂತರ ಸುಹಾನಿ ಭಟ್ನಾಗರ್ ಅನೇಕ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಸ್ವಲ್ಪ ಸಮಯದ ನಂತರ, ಅವರು ನಟನೆಯನ್ನು ಬಿಟ್ಟು ಅಧ್ಯಯನದತ್ತ ಗಮನ ಹರಿಸಲು ನಿರ್ಧರಿಸಿದರು.

ನವೆಂಬರ್ 2021 ರವರೆಗೆ, ಸುಹಾನಿ ಭಟ್ನಾಗರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದರು. ಆಕೆ ತನ್ನ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಳು. ಅವರು ಅನೇಕ ತಮಾಷೆಯ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡರು. ಇನ್‌ಸ್ಟಾಗ್ರಾಮ್‌ನಲ್ಲಿ ಸುಹಾನಿ 20.9K ಅನುಯಾಯಿಗಳನ್ನು ಹೊಂದಿದ್ದರು. 'ದಂಗಲ್' ಚಿತ್ರದ ಸಹನಟರ ಜೊತೆಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಅದು ಅಭಿಮಾನಿಗಳಿಗೆ ಇಷ್ಟವಾಯಿತು.

ಸುಹಾನಿ ಭಟ್ನಾಗರ್ ಅವರ ಹಠಾತ್ ನಿಧನದಿಂದ ಇಂಡಸ್ಟ್ರಿಯಲ್ಲಿ ದುಃಖದ ವಾತಾವರಣವಿದೆ. ಇಷ್ಟು ಚಿಕ್ಕ ಮುದ್ದು ಮುದ್ದು ಹುಡುಗಿ ಈ ರೀತಿ ಜಗತ್ತಿಗೆ ವಿದಾಯ ಹೇಳಿದ್ದಾಳೆ ಎಂದರೆ ಯಾರಿಗಾದರೂ ನಂಬುವುದು ಕಷ್ಟ. ಫಾತಿಮಾ ಸನಾ ಶೇಖ್ ಮತ್ತು ಸನ್ಯಾ ಮಲ್ಹೋತ್ರಾ 'ದಂಗಲ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸನ್ಯಾ ಅವರು ಹಿರಿಯ ಬಬಿತಾ ಫೋಗಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೂಪರ್‌ಹಿಟ್ ಆಗಿತ್ತು. ಎಲ್ಲಾ ನಟರ ಕೆಲಸವನ್ನು ವಿಮರ್ಶಕರು ಮತ್ತು ಅಭಿಮಾನಿಗಳು ಮೆಚ್ಚಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com