
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ 200 ಕೋಟಿ ರೂಪಾಯಿ ವಂಚನೆ ಕೇಸ್ನಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಬೆದರಿಕೆ ಬಂದಿದೆ.
ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ರಕ್ಕಮ್ಮನ ಪಾತ್ರ ಮಾಡಿದ್ದ ಜಾಕ್ವೆಲಿನ್ ಫರ್ನಾಂಡಿಸ್ ರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಸುಕೇಶ್ ಚಂದ್ರಶೇಖರ್ ಬೆದರಿಕೆ ಹಾಕಿದ್ದಾನೆ.
ಸುಕೇಶ್ ಚಂದ್ರಶೇಖರ್ ತಮ್ಮ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಡುವೆ ನಡೆದಿದ್ದ ವಾಟ್ಸಪ್ ಸಂದೇಶಗಳನ್ನು ಆತ ಲೀಕ್ ಮಾಡಿದ್ದಾನೆ. ಇದು ಬರೀ ಟೀಸರ್ . ನೂರಾರು ಚಾಟ್ಗಳು, ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಇದನ್ನು ತನಿಖಾಧಿಕಾರಿಗಳಿಗೆ ನೀಡದ ಹೊರತು ಬೇರೆ ಆಯ್ಕೆ ಉಳಿದಿಲ್ಲ ಎಂದು ಸುಕೇಶ್ ಚಂದ್ರಶೇಖರ್ ಹೇಳಿರುವುದಾಗಿ ವರದಿ ಆಗಿದೆ.
Advertisement