'ಉರಿ' ಸಿನಿಮಾ ನಿರ್ದೇಶಕ ಆದಿತ್ಯ ಧರ್ ಮುಂದಿನ ಚಿತ್ರಕ್ಕೆ ರಣವೀರ್ ಸಿಂಗ್ ನಾಯಕ

ಇನ್ನು ಹೆಸರಿಡದ ಈ ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಸೇರಿದಂತೆ ದೊಡ್ಡ ತಾರಾಗಣವನ್ನು ಒಳಗೊಂಡಿದೆ.
ರಣವೀರ್ ಸಿಂಗ್
ರಣವೀರ್ ಸಿಂಗ್
Updated on

ಮುಂಬೈ: ಉರಿ: ದಿ ಸರ್ಜಿಕಲ್ ಸ್ಟ್ರೈಕ್‌ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಮುಂದಿನ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅವರು ಅಭಿನಯಿಸಲಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.

ಇನ್ನು ಹೆಸರಿಡದ ಈ ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಸೇರಿದಂತೆ ದೊಡ್ಡ ತಾರಾಗಣವನ್ನು ಒಳಗೊಂಡಿದೆ.

2019 ರಲ್ಲಿ ತೆರೆಕಂಡ ಉರಿ: ದಿ ಸರ್ಜಿಕಲ್ ಸ್ಟ್ರೈಕ್‌ ಚಿತ್ರದ ಖ್ಯಾತಿಯ ಆದಿತ್ಯ ಧರ್ ಅವರು, ಸಹೋದರ ಲೋಕೇಶ್ ಧರ್ ಅವರೊಂದಿಗೆ ತಮ್ಮ ಬ್ಯಾನರ್ B62 ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಜೊತೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರಣವೀರ್ ಸಿಂಗ್
ಖಡಕ್ ಪೊಲೀಸ್ ಆಗಿ ರಣವೀರ್ 'ಸಿಂಬಾ' ಚಿತ್ರದ ಟ್ರೈಲರ್

ಜಿಯೋ ಸ್ಟುಡಿಯೋಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ತಾರಾಗಣವನ್ನು ಘೋಷಿಸಿದ್ದು, "ಈ ಸಿನಿಮಾ ಮೂಲಕ ಕನಸುಗಳು ಹುಟ್ಟಿಕೊಂಡಿವೆ! ಆದಿತ್ಯ ಧರ್ ನಿರ್ದೇಶನದ, ರಣವೀರ್‌ ಸಿಂಗ್ ಅಭಿನಯದ ಚಿತ್ರವು ಹಿಂದೆಂದಿಗಿಂತಲೂ ಉತ್ತಮ ಸಿನಿಮಾ ನೀಡಲು ಉತ್ಸಕರಾಗಿದ್ದೇವೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com