Baaghi 4: ಬಾಲಿವುಡ್ ಗೆ ಹಾರಿದ ನಿರ್ದೇಶಕ ಹರ್ಷ; ಟೈಗರ್ ಶ್ರಾಫ್ ಗೆ ಆ್ಯಕ್ಷನ್- ಕಟ್!
ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ ನಿರ್ದೇಶಕ ಎ. ಹರ್ಷ ತನ್ನ ಚೊಚ್ಚಲ ಹಿಂದಿ ಚಿತ್ರ 'ಬಾಗಿ 4' ನೊಂದಿಗೆ ಬಾಲಿವುಡ್ ಗೆ ಹಾರಿದ್ದಾರೆ. ಟೈಗರ್ ಶ್ರಾಫ್ ಅಭಿನಯದ ಸಿನಿಮಾಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸುಮಾರು 800 ಗೀತೆಗಳಿಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಹರ್ಷ, 2007ರಲ್ಲಿ ಗೆಳೆಯ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕ ಕ್ಯಾಪ್ ತೊಟ್ಟಿದ್ದರು.
ಅಲ್ಲಿಂದ ಇಲ್ಲಿಯವರೆಗೂ ಶಿವರಾಜ್ ಕುಮಾರ್ ಅವರೊಂದಿಗೆ ಭಜರಂಗಿ, ವಜ್ರಕಾಯ ಸೇರಿ 4 ಸಿನಿಮಾಗಳು, ದರ್ಶನ್ ಜೊತೆಗೆ ಚಿಂಗಾರಿ, ಪುನೀತ್ ರಾಜ್ ಕುಮಾರ್ ಜೊತೆಗೆ ಅಂಜನಿ ಪುತ್ರ ಸೇರಿದಂತೆ ಒಟ್ಟು 11 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಟ್ರೈಗರ್ ಶ್ರಾಫ್ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿರುವ ಫೋಸ್ಟರ್ ನೊಂದಿಗೆ ಹರ್ಷ ನಿರ್ದೇಶಕರಾಗಿರುವುದನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಫೋಸ್ಟರ್ ನಲ್ಲಿ ಟೈಗರ್ ಶ್ರಾಫ್ ವಾಶ್ ರೂಮ್ ನಲ್ಲಿ ಮಚ್ಚು ಹಿಡಿದು ರಕ್ತಸಿಕ್ತವಾಗಿ ಕೂತಿದ್ದಾರೆ. ಈ ಬಾರಿ ಅವನು ಮೊದಲಿನಂತಿಲ್ಲ ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.
ಹೆಸರಾಂತ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಆರಂಭವಾಗಿದ್ದು, ಸೆಪ್ಟೆಂಬರ್ 5, 2025ರಂದು ಬಿಡುಗಡೆಗೆ ಯೋಜಿಸಲಾಗಿದೆ.
ತೆಲುಗು ಚಿತ್ರ ಭೀಮಾದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಲಿವುಡ್ ನಲ್ಲಿ ಚೊಚ್ಚಲ ಪ್ರವೇಶಕ್ಕೆ ಚರ್ಚೆಯಾಗಿತ್ತು. ಮುಂಬೈಯಲ್ಲಿ ಕಳೆದ 8 ತಿಂಗಳಿನಿಂದ ಬೀಡು ಬಿಟ್ಟಿದ್ದು,ಚಿತ್ರದ ಕಡೆಗೆ ಸಂಪೂರ್ಣ ಗಮನ ಹರಿಸಿದ್ದೇನೆ. ನಿರ್ಮಾಪಕರು ನನ್ನ ಕೆಲಸವನ್ನು ನೋಡಿದ್ದು, ವಿಶಿಷ್ಟ ರೀತಿಯಲ್ಲಿ ಬಾಗಿ-4 ಮೂಡಿಬರುವ ವಿಶ್ವಾಸದಲ್ಲಿದ್ದಾರೆ ಎಂದು ಹರ್ಷ ತಿಳಿಸಿದ್ದಾರೆ.
ಬಾಗಿ-4 ದಕ್ಷಿಣ ಭಾರತದ ಯಾವುದೇ ರಿಮೇಕ್ ಚಿತ್ರವಲ್ಲ, ಟೈಗರ್ ಶ್ರಾಫ್ ಅವರ ಆ್ಯಕ್ಷನ್ ಸಿಕ್ವೆನ್ಸ್ ನ್ನು ಇನ್ನಷ್ಟು ರೋಚಕವಾಗಿ ಮತ್ತು ಭಾವನೆಗಳೊಂದಿಗೆ ತೋರಿಸಲಾಗುತ್ತಿದ್ದು, ಅದು ವೀಕ್ಷಕರಿಗೆ ಹೊಸ ಅನುಭವವನ್ನುಂಟು ಮಾಡಲಿದೆ. ಚಿತ್ರಕಥೆ ವಿಶಿಷ್ಠವಾಗಿದೆ. ಸಂಭಾಷಣೆಯನ್ನು ರಜತ್ ಅರೋರಾ ಬರೆದಿದ್ದಾರೆ.
ಈ ಚಿತ್ರದಲ್ಲಿ ನಾನು ನೃತ್ಯ ಸಂಯೋಜನೆ ಮಾಡಿಲ್ಲ. ಸಂಪೂರ್ಣ ಗಮನವನ್ನು ನಿರ್ದೇಶನದತ್ತ ಹರಿಸಿದ್ದೇನೆ. ಒಬ್ಬ ನಿರ್ದೇಶಕನಾಗಿ ನನ್ನ ಉತ್ತಮ ಪ್ರಯತ್ನ ಹಾಕಿದ್ದಾನೆ. ಆದರೆ ಹಿಂದಿ ಸಿನಿಮಾ ನನಗೆ ಹೊಸ ಚಾಪ್ಟರ್ ಆಗಲಿದೆ. ಬಾಲಿವುಡ್ ನಲ್ಲಿ ನಿರ್ದೇಶಕನಾಗಿ ಉಳಿಯುವಲ್ಲಿ ಈ ಚಿತ್ರದ ಬಗ್ಗೆ ತುಂಬಾ ಕುತೂಹಲದಿಂದ ಕಾಯುತ್ತಿರುವುದಾಗಿ ನಿರ್ದೇಶಕ ಹರ್ಷ ಹೇಳಿದರು.