ನವದೆಹಲಿ: "ಇಂದು ನಾನು ಎಲ್ಲರ ನೆಚ್ಚಿನ ಟಾರ್ಗೆಟ್ ಆಗಿದ್ದೇನೆ. ನಿದ್ರಿಸುತ್ತಿರುವ ದೇಶವನ್ನು ಎಬ್ಬಿಸಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದು ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು, ತಾವು ಅಭಿನಯಿಸಿದ ಎಮರ್ಜೆನ್ಸಿ ಚಿತ್ರಕ್ಕೆ CBFC ಪ್ರಮಾಣಪತ್ರ ಸಿಗದಿರುವ ಬಗ್ಗೆ ಕಿಡಿ ಕಾರಿದ್ದಾರೆ.
ಎಮರ್ಜೆನ್ಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC)ಗೆ ನಿರ್ದೇಶನ ನೀಡುವಂತೆ ಕೋರಿ ಕಂಗನಾ ಬಾಂಬೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆದೇಶ ನೀಡಲು ನಿರಾಕರಿಸಿದೆ. ಇದರ ಬೆನ್ನಲ್ಲೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಸಂಸದೆ, ನಾನು ಎಲ್ಲರ ಟಾರ್ಗೆಟ್ ಆಗಿದ್ದೇನೆ ಎಂದಿದ್ದಾರೆ.
ನಾನು ಏನು ಮಾತನಾಡುತ್ತಿದ್ದೇನೆಂದು ಅವರಿಗೆ ತಿಳಿದಿಲ್ಲ. ನಾನು ಏಕೆ ತುಂಬಾ ಕಾಳಜಿ ವಹಿಸುತ್ತೇನೆ ಎಂದು ಅವರಿಗೆ ಗೊತ್ತಿಲ್ಲ. ಏಕೆಂದರೆ ಅವರು ಶಾಂತಿಯನ್ನು ಬಯಸುತ್ತಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಅವರು ಬಯಸುವುದಿಲ್ಲ. ಆದರೆ ಗಡಿಯಲ್ಲಿರುವ ಆ ಬಡ ಸೈನಿಕನಿಗೂ ಸುಮ್ಮನಿರುವ ಅದೇ ಸವಲತ್ತು ಸಿಗಲಿ ಎಂದು ಹಾರೈಸುತ್ತೇನೆ. ಅವರು ಪಾಕಿಸ್ತಾನಿ ಅಥವಾ ಚೀನಿಯರನ್ನು ಶತ್ರುಗಳೆಂದು ಪರಿಗಣಿಸುವ ಅಗತ್ಯವಿಲ್ಲ ಎಂದೆನ್ನಿಸುತ್ತಿದೆ ಎಂದು ಬಾಲಿವುಡ್ ನಟಿ ಪೋಸ್ಟ್ ಹಾಕಿದ್ದಾರೆ.
ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’ಚಿತ್ರ ಬಿಡುಗಡೆಗೆ ಸಿಖ್ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ವಿವಾದದಲ್ಲಿ ಸಿಲುಕಿಕೊಂಡಿದೆ. ಚಿತ್ರದ ನಿರ್ಮಾಪಕರು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತಿದ್ದಾರೆ ಮತ್ತು ಐತಿಹಾಸಿಕ ಸಂಗತಿಗಳನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಸದಸ್ಯರಿಗೆ ಜೀವ ಬೆದರಿಕೆಯ ನಂತರ ಚಲನಚಿತ್ರಕ್ಕೆ ಅನುಮತಿಯನ್ನು ತಡೆಹಿಡಿದಿದೆ ಎಂದು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
Advertisement