
ಮುಂಬೈ: ಎಆರ್ ಮುರುಗದಾಸ್ ನಿರ್ದೇಶನದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ ನೀರಸ ಪ್ರತಿಕ್ರಿಯೆ ಪಡೆದಿದೆ. ಚಿತ್ರ ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. ಚಿತ್ರ ಈವರೆಗೆ ಎಷ್ಟು ಗಳಿಸಿದೆ ಎಂಬುದರ ಕುರಿತು ಚಿತ್ರ ನಿರ್ಮಾಣ ಸಂಸ್ಥೆಯು ಮಾಹಿತಿ ಹಂಚಿಕೊಂಡಿದೆ.
ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಪ್ರಕಾರ, ಸಿಕಂದರ್ ಚಿತ್ರವು ಬಿಡುಗಡೆಯಾದ 8 ದಿನಗಳಲ್ಲಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹197.45 ಕೋಟಿ ಸಂಗ್ರಹಿಸಿದೆ.
ಸಿಕಂದರ್ ಭಾನುವಾರ ಭಾರತದಲ್ಲಿ ₹7.11 ಕೋಟಿ ಮತ್ತು ವಿದೇಶಗಳಲ್ಲಿ ₹2.5 ಕೋಟಿ ಗಳಿಸಿದೆ. ಈಮೂಲಕ ವಿಶ್ವದಾದ್ಯಂತ ಒಟ್ಟು ₹197.45 ಕೋಟಿ ರೂ. ಗಳಿಕೆ ಕಂಡಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. Sacnilk ಪ್ರಕಾರ, ಈ ಚಿತ್ರವು ಭಾರತದಲ್ಲಿ ₹4.50 ಕೋಟಿ ನಿವ್ವಳ ಗಳಿಕೆ ಮಾಡಿ ₹100 ಕೋಟಿ ಗಡಿ ದಾಟಿದೆ.
ಶನಿವಾರ ಮತ್ತು ಶುಕ್ರವಾರದ ಗಳಿಕೆಗೆ ಹೋಲಿಸಿದರೆ ಚಿತ್ರತಂಡ ಹಂಚಿಕೊಂಡ ಅಂಕಿಅಂಶಗಳು ಸ್ವಲ್ಪ ಸುಧಾರಣೆಯನ್ನು ತೋರಿಸುತ್ತವೆ. ಚಿತ್ರವು ಭಾರತದಲ್ಲಿ ಕ್ರಮವಾಗಿ ₹6.18 ಕೋಟಿ ಮತ್ತು ₹5.38 ಕೋಟಿ ಮತ್ತು ವಿದೇಶದಲ್ಲಿ ₹3.5 ಕೋಟಿ ಮತ್ತು ₹3 ಕೋಟಿ ಗಳಿಸಿತ್ತು. ಚಿತ್ರವು ಬಿಡುಗಡೆಯಾದ ಮೊದಲ ದಿನ ನಿರಾಶಾದಾಯಕ ₹54.72 ಕೋಟಿ ಸಂಗ್ರಹಿಸಿತು ಮತ್ತು ಎರಡನೇ ದಿನದ ವೇಳೆಗೆ ₹105.89 ಕೋಟಿ ಸಂಗ್ರಹಿಸಿತು.
5ನೇ ದಿನದಿಂದ ಸಿಕಂದರ್ ನಿರಂತರವಾಗಿ ಒಂದಂಕಿಯ ಗಳಿಕೆ ಮಾಡುತ್ತಿದೆ. ವಿಶೇಷವಾಗಿ ಸಲ್ಮಾನ್ ಚಿತ್ರಗಳಿಗೆ ಇದು ಆತಂಕಕಾರಿಯಾಗಿದೆ. ಸಲ್ಮಾನ್ ಖಾನ್ ನಟನೆಯ ಟೈಗರ್ 3 ಚಿತ್ರ ಬಿಡುಗಡೆಯಾದ 8 ದಿನಗಳಲ್ಲಿ ವಿಶ್ವದಾದ್ಯಂತ ₹373 ಕೋಟಿ ಗಳಿಸಿತ್ತು. ಆದರೆ, ಸಿಕಂದರ್ ತೆರೆಕಂಡು 8 ದಿನ ಕಳೆದಿದ್ದರೂ ವಿಶ್ವದಾದ್ಯಂತ ₹152.50 ಕೋಟಿ ಗಳಿಕೆ ಕಂಡಿದೆ. ಆದರೆ, ನಟನ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'ಗಿಂತ ಉತ್ತಮವಾಗಿದೆ.
ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ.
Advertisement