
ಮುಂಬೈ: ನನ್ನ ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾದಂತಹ ಸಿನಿಮಾಗಳನ್ನು ಮೂರ್ಖರು ಮಾತ್ರ ಟೀಕಿಸುತ್ತಾರೆ ಎಂದು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದಾರೆ.
'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದ ಟೈಟಲ್ ಕುರಿತು ಜಯ ಬಚ್ಚನ್ ಇತ್ತೀಚಿಗೆ ಟೀಕೆ ಮಾಡಿದ್ದರು. ಈ ಟೀಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ನಟ ಅಕ್ಷಯ್ ಕುಮಾರ್, ಅವರು ಹಾಗೇ ಹೇಳಿದ್ದರೆ ಅವರು ಹೇಳಿದ್ದು ಸರಿ, ನಾನು ಅಂತಹ ಸಿನಿಮಾ ಮಾಡುವ ಮೂಲಕ ತಪ್ಪು ಮಾಡಿದ್ದರೆ ಅವರು ಹೇಳಿದ್ದು ಸರಿ ಇರಬಹುದು ಎಂದರು.
ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ ಲಿಫ್ಟ್, ಕೇಸರಿ1 ಮಾಡಿದ್ದೇನೆ. ಈಗ ಕೇಸರಿ 2 ಮಾಡಲಾಗಿದೆ. ಅಂತಹ ಅನೇಕ ಚಿತ್ರಗಳಿವೆ.ಈ ಸಿನಿಮಾಗಳನ್ನು ನನ್ನ ಹೃದಯದಿಂದ ಮಾಡಿದ್ದೇನೆ . ಒಂದು ಸಿನಿಮಾ ಜನರಿಗೆ ಹಲವು ವಿಷಯಗಳನ್ನು ಕಲಿಸುತ್ತದೆ. ಯಾರೂ ಅದನ್ನು ಟೀಕಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಕೆಲ ಮೂರ್ಖರು ಮಾತ್ರ ಟೀಕಿಸುತ್ತಾರೆ ಎಂದು ಹೇಳಿದರು.
ಜಯಾ ಬಚ್ಚನ್ ಹೇಳಿದ್ದೇನು?
ಟಾಯ್ಲೆಟ್ ಏಕ್ ಪ್ರೇಮ್ ಕಥಾ ಟೈಟಲ್ ಕುರಿತು ಮಾತನಾಡಿದ್ದ ಜಯಾ ಬಚ್ಚನ್, ನಾನು ಅಂತಹ ಹೆಸರಿನ ಚಿತ್ರವನ್ನು ಎಂದಿಗೂ ನೋಡುವುದಿಲ್ಲ. ಇದು ಹೆಸರೇ? ಅಂತಹ ಟೈಟಲಿನ ಸಿನಿಮಾವನ್ನು ನೀವು ನೋಡಲು ಬಯಸುತ್ತೀರಾ? ಇಷ್ಟೊಂದು ಜನರಲ್ಲಿ ಕೇವಲ ನಾಲ್ಕು ಜನರು ಮಾತ್ರ ಅಂತಹ ಸಿನಿಮಾ ನೋಡಲು ಬಯಸುತ್ತಾರೆ. ಆ ಸಿನಿಮಾ ವಿಫಲವಾಗಿದೆ ಎಂದು ಹೇಳಿದ್ದಾರೆ.
Advertisement