
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ದೀರ್ಘಕಾಲದಿಂದ ನಡೆಯುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯ 17 ನೇ ಸೀಸನ್‌ನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
ಹೊಸ ಸೀಸನ್ ನಲ್ಲಿ ಹೊಸ ಸ್ಪರ್ಧಿಗಳು ಮತ್ತು ಸವಾಲಿನ ಪ್ರಶ್ನೆಗಳನ್ನು ಮಾತ್ರವಲ್ಲದೆ, ಕಾರ್ಯಕ್ರಮದ 25 ವರ್ಷಗಳ ಪಯಣದ ಆಚರಣೆಯಲ್ಲಿ ವಿಶೇಷ ಆಶ್ಚರ್ಯಗಳನ್ನು ಸಹ ಒಳಗೊಂಡಿರಲಿದೆ ಎಂದು ಕಾರ್ಯಕ್ರಮ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಸೀಸನ್ ಲೆಜೆಂಡರಿ ನಿರೂಪಕರ ನೇತೃತ್ವದಲ್ಲಿ, ಕೆಬಿಸಿ 17 ಭಾರತೀಯ ಕಿರುತೆರೆ ಮಾಧ್ಯಮದಲ್ಲಿ ಅತ್ಯಂತ ಬೇಡಿಕೆಯ ಕಾರ್ಯಕ್ರಮಗಳಲ್ಲಿ ಒಂದಾಗುವ ಭರವಸೆ ಹೊಂದಿದೆ. ಆರಂಭಿಕ ಕಂತು ಕೆಲವು ಹೊಸ ಪ್ರಕಟಣೆಗಳನ್ನು ಪ್ರಸ್ತುತಪಡಿಸುವುದಲ್ಲದೆ, ಅದರೊಂದಿಗೆ ಹೊಸ ಉತ್ಸಾಹದ ಅಲೆಯನ್ನು ತರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
25 ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಗುರುತಿಸಲು, ಸೋನಿ ಟಿವಿ ಕಾರ್ಯಕ್ರಮವು #JahanAkalHaiWahaanAkadHai ಎಂಬ ಅಭಿಯಾನವನ್ನು ಸಹ ಪ್ರಾರಂಭಿಸಿದೆ, ಇದು ಇಂದಿನ ಬುದ್ಧಿಶಕ್ತಿಯು ಜ್ಞಾನವನ್ನು ಮಾತ್ರವಲ್ಲದೆ ಅದರೊಂದಿಗೆ ಬರುವ ಆತ್ಮವಿಶ್ವಾಸವನ್ನು ಹೇಗೆ ಹೆಮ್ಮೆಯಿಂದ ಆಚರಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
2000ನೇ ಇಸವಿಯಲ್ಲಿ ಪ್ರಾರಂಭವಾದಾಗಿನಿಂದ 2003ನೇ ಇಸವಿ ಹೊರತುಪಡಿಸಿ ಮತ್ತೆಲ್ಲಾ ಸೀಸನ್ ನ ನಿರೂಪಕರಾಗಿರುವ ಅಮಿತಾಬ್ ಬಚ್ಚನ್, ಈ ಬಾರಿ ಹೊಸ ಸೀಸನ್‌ನ ಮುನ್ನಾದಿನದಂದು ತಮ್ಮ ಬ್ಲಾಗ್‌ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
'ಕೆಲಸದಲ್ಲಿ .. ಬೇಗ ಏಳುವುದು, ಬೇಗ ಕೆಲಸ ಮಾಡುವುದು .. ಕೆಬಿಸಿ ಹೊಸ ಸೀಸನ್‌ನ ಮೊದಲ ದಿನ ಸಹಜವಾಗಿ ನನ್ನ ದೇಹದ ನರಗಳು .. ನಡುಗುವ ಮೊಣಕಾಲುಗಳು ಆತಂಕವನ್ನು ಸಹ ಉಂಟುಮಾಡುತ್ತದೆ' ಎಂದು ಬರೆದುಕೊಂಡಿದ್ದಾರೆ. 24 ವರ್ಷಗಳ ನಂತರವೂ ಅವರು ಕೆಬಿಸಿ ನಡೆಸಿಕೊಡುವ ಉತ್ಸಾಹ ಉಳಿಸಿಕೊಂಡಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿ ಸೀಸನ್ 17 ಆಗಸ್ಟ್ 11 ರಂದು ಪ್ರಸಾರ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿದ್ದು, ಸೋನಿಲೈವ್‌ನಲ್ಲಿ ಸ್ಟ್ರೀಮ್ ಆಗಲಿದೆ.
Advertisement