
ಹೃತಿಕ್ ರೋಷನ್ ಮತ್ತು ಜೂನಿಯರ್ NTR ಅಭಿನಯದ 'War 2'ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದು, ಐದು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆಗಸ್ಟ್ 14 ರಂದು ರಜನಿಕಾಂತ್ ಅವರ "ಕೂಲಿ" ಜೊತೆಗೆ ಬಿಡುಗಡೆಯಾದ ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರ ವಿಶ್ವದಾದ್ಯಂತ ರೂ. 300 ಕೋಟಿ ಗಳಿಸಿದೆ.
2019ರಲ್ಲಿ ಬಿಡುಗಡೆಯಾದ 'ವಾರ್' ಚಿತ್ರದ ಸಿಕ್ವೆಲ್ ನಲ್ಲಿ ವಾಣಿ ಕಪೂರ್ ಮತ್ತು ಟೈಗರ್ ಶ್ರಾಫ್ ಅವರೊಂದಿಗೆ RAW ಏಜೆಂಟ್ ಕಬೀರ್ ಪಾತ್ರದಲ್ಲಿ ರೋಷನ್ ಕಾಣಿಸಿಕೊಂಡಿದ್ದಾರೆ. ಇದು ಜ್ಯೂನಿಯರ್ NTR ಅವರಿಗೆ ಚೊಚ್ಚಲ ಬಾಲಿವುಡ್ ಚಿತ್ರವಾಗಿದೆ.
ಇಲ್ಲಿಯವರೆಗೂ ನಾಯಕರಾಗಿ ಕಾಣಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ಖಡಕ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುರುವಾರ ಎಲ್ಲಾ ಭಾಷೆಗಳಲ್ಲಿ ರೂ. 54 ಕೋಟಿ ಕಲೆಕ್ಷನ್ ಮಾಡಿತ್ತು.
ಶುಕ್ರವಾರ ಸ್ವಲ್ಪಮಟ್ಟಿಗೆ ರೂ. 61 ಕೋಟಿ ಗಳಿಸಿತ್ತು. ಶನಿವಾರ ಮತ್ತು ಭಾನುವಾರ ಕ್ರಮವಾಗಿ ರೂ. 36 ಕೋಟಿ ಮತ್ತು 34 ಕೋಟಿ ಗಳಿಸಿದೆ. ಚಿತ್ರ ಬಿಡುಗಡೆಯಾದ ಐದನೇ ದಿನವಾದ ಸೋಮವಾರ ರೂ.9.50 ಕೋಟಿ ಕಲೆಕ್ಷನ್ ಮಾಡಿದ್ದು, ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ರೂ. 60.50 ಕೋಟಿ ಗಳಿಸಿದೆ.
ಇದರೊಂದಿಗೆ ಒಟ್ಟಾರೇ ಬಾಕ್ಸ್ ಆಫೀಸ್ ನಲ್ಲಿ ರೂ. 300.50 ಕೋಟಿ ಕಲೆಕ್ಷನ್ ಮಾಡಿರುವುದಾಗಿ ನಿರ್ಮಾಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.
Advertisement