

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಇತ್ತೀಚಿನ ಫೋಸ್ಟ್ ಗೆ, ಕೆಲವರು ವಯಸ್ಕರ ಹೊಸ ಸಿನಿಮಾ ಮಾಡಿ ಎಂದು ಟ್ರೋಲ್ ಮಾಡಿದ್ದಾರೆ. ಇದರ ವಿರುದ್ಧ ರಾಜ್ ಕುಂದ್ರಾ ಉರಿದು ಬಿದಿದ್ದಾರೆ.
ಅಂಥದ್ದು ಏನಾಯಿತು! ದಂಪತಿಗಳ ವಿರುದ್ಧ 60 ಕೋಟಿ ರೂ. ವಂಚನೆ ಪ್ರಕರಣ ದಾಖಲಾಗಿರುವಂತೆಯೇ ರಾಜ್ ಕುಂದ್ರಾ, ಗುರುವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿದ್ದು, ನಾನು ತಲೆಬಗ್ಗಿಸಲ್ಲ, ನಾನು ವಂಚನೆ ಮಾಡಿರಿಲ್ಲ. ಆಗ ಮುಖವಾಡಗಳು ಕಳಚಿಬಿದ್ದವು" ಎಂದು ಹೇಳಿಕೊಂಡಿದ್ದರು.
ಕೆಲವರು ನನ್ನನ್ನು ಸೋಲಿಸಬಹುದು ಎಂದು ಭಾವಿಸಿ ತಮ್ಮ ಸ್ಥಾನಗಳನ್ನು ದುರುಪಯೋಗ ಪಡಿ ಸಿಕೊಂಡರು. ಆದರೆ ವಾಹೆಗುರು ದಿ ಶಕ್ತಿ ಎಲ್ಲಾ ಲೌಕಿಕ ಶಕ್ತಿಗಳಿಗಿಂತ ಮೇಲಿದೆ ಎಂಬುದನ್ನು ಅವರು ಮರೆತಿದ್ದರು. ನಾನು ಸತ್ಯದ ಬೇರಿನಲ್ಲಿದ್ದೇನೆ. ಈಗ ನಿಮ್ಮನ್ನು ಕೇಳಿಕೊಳ್ಳಿ. ನೀವು ಎಲ್ಲಿದ್ದೀರಿ? ಅಂತಾ ಪೋಸ್ಟ್ ಮಾಡಿದ್ದರು.
ನಿನಗೂ ಪಾತ್ರ ಬೇಕಾ? ಈ ಪೋಸ್ಟ್ ಮಾಡುತ್ತಿದ್ದಂತೆಯೇ ಬಳಕೆದಾರರೊಬ್ಬರು, ರಾಜ್ ಕುಂದ್ರಾ ಅವರ ಈ ಹಿಂದಿನ ವಯಸ್ಕರ ಸಿನಿಮಾ ನಿರ್ಮಾಣದ ವಿವಾದ ಉಲ್ಲೇಖಿಸಿ ಬಾಯ್, ಹೊಸ ವಯಸ್ಕರ ಸಿನಿಮಾ ಅಥವಾ Series) ಮಾಡಿ ಎಂದು ಪೋಸ್ಟ್ ಮಾಡಿದ್ದರು. ಇದರಿಂದ ಸಿಟ್ಟಾದ ರಾಜ್ ಕುಂದ್ರಾ, ನಿನಗೂ ಪಾತ್ರ ಬೇಕಾ ಅಂತಾ ಕೇಳಿದ್ದಾರೆ.
ಮೊಬೈಲ್ ಆ್ಯಪ್ ಗಳ ಮೂಲಕ ವಯಸ್ಕರ ಸಿನಿಮಾ ನಿರ್ಮಾಣ ಮತ್ತು ವಿತರಣೆ ಆರೋಪದ ಮೇರೆಗೆ 2021ರಲ್ಲಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದರು. 2022ರ ಡಿಸೆಂಬರ್ ನಲ್ಲಿ ಅವರಿಗೆ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು.
Advertisement