

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆ ಎಂದು ಹೇಳಿಕೊಂಡಿರುವ ಸ್ವಯಂ ಘೋಷಿಸಿತ ವೈದ್ಯರೊಬ್ಬರ ವಿರುದ್ಧ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದ್ದಾರೆ. ವಾಸ್ತವಿಕವಾಗಿ ಏನನ್ನೂ ಪರಿಶೀಲಿಸದೆ ಇಂತಹ ಹೇಳಿಕೆ ನೀಡುವ ವಂಚಕರ ಮಾತನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜನ್ ಎಂದು ಹೇಳಿಕೊಳ್ಳುವ ಡಾ. ಪ್ರಶಾಂತ್ ಯಾದವ್ ಎಂಬ ಬಳಕೆದಾರರೊಬ್ಬರು ಸೋಮವಾರ ತನ್ನ ಇನ್ಸಾಟಾಗ್ರಾಮ್ ಖಾತೆಯಲ್ಲಿ ನಟಿಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಚರ್ಮದ ಮೇಲಿನ ಕಪ್ಪು ಚುಕ್ಕೆಗಳು (botox) ತುಟ್ಟಿ (fillers)ಮತ್ತು ಮೂಗಿನ (nose job)ಪ್ಲಾಸ್ಟಿಕ್ ಸರ್ಜಾರಿ ಮಾಡಿಸಿಕೊಂಡಿಸಿಕೊಂಡಿದ್ದಾರೆ ಎಂದು ಯಾದವ್ ಹೇಳಿದ್ದರು. ಅಲ್ಲದೇ ರಾಕುಲ್ ಪ್ರೀತ್ ಸಿಂಗ್ ತನ್ನ ನಿಜರೂಪವನ್ನು ಜನರೊಂದಿಗೆ ಹೇಳಿಕೊಳ್ಳದೆ ಹೇಗೆ ತಪ್ಪಿಸಿಕೊಳ್ಳುತ್ತಾರೆ ಮತ್ತು ಫಿಟ್ ನೆಸ್ ಬಗ್ಗೆ ಮಾತನಾಡುತ್ತಾರೆ ಎಂಬುದನ್ನು ವಿವರಿಸಿದ್ದರು.
ಈ ವಿಡಿಯೋವನ್ನು ತನ್ನ ಇನ್ಸಾಟಾಗ್ರಾಮ್ ನಲ್ಲಿ ಮರು ಹಂಚಿಕೆ ಮಾಡಿರುವ ರಾಕುಲ್ ಪ್ರೀತ್ ಸಿಂಗ್, ಅಂತಹ ವಿಷಯವು ಜನರನ್ನು ದಾರಿತಪ್ಪಿಸುವುದಲ್ಲದೇ ಬೇರೆ ಮತ್ತೇನೂ ಇಲ್ಲ ಎಂದಿದ್ದಾರೆ.
ವಂಚನೆ ಜಾಗರೂಕರಾಗಿ, ಅವರಂತಹ ಜನರು ವೈದ್ಯರು ಎಂದು ಹೇಳಿಕೊಳ್ಳುವುದು ಮತ್ತು ಯಾವುದೇ ವಾಸ್ತವಿಕ ಪರಿಶೀಲನೆಯಿಲ್ಲ ಹೇಳಿಕೆಗಳನ್ನು ನೀಡುತ್ತಿರುವುದು, ಜನರನ್ನು ದಾರಿತಪ್ಪಿಸುವುದು ಭಯಾನಕವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ. ಇತ್ತೀಚೆಗೆ 'ದಿ ದೀ ಪ್ಯಾರ್ ದೀ 2' ನಲ್ಲಿ ಕಾಣಿಸಿಕೊಂಡಿರುವ ನಟಿ, ಈ ರೀತಿಯ ಯಾವುದೇ ಸಮಸ್ಯೆಗಿಲ್ಲ. ಆದರೆ ತೂಕದಲ್ಲಿ ಇಳಿಕೆ ತನ್ನ ಬದಲಾವಣೆಗೆ ಕಾರಣ ಎಂದಿದ್ದಾರೆ.
ನಟಿಯಾಗಿ ಪ್ರಾಚೀನ ಮತ್ತು ಆಧುನಿಕ ವಿಜ್ಞಾನಗಳನ್ನು ಅರಿತಿರುವ ನಾನು, ಜನರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದರಲ್ಲಿ ನನಗೆ ಯಾವುದೇ ಅಭ್ಯಂತರವಿಲ್ಲ ಆದರೆ ತೂಕ ಇಳಿಕೆ ಕಠಿಣ ಶ್ರಮದಿಂದ ಆಗಬೇಕು. ಇಂತಹ ನಕಲಿ ಡಾಕ್ಟರ್ ಬಗ್ಗೆ ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ.
Advertisement