

ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ನ ಜನಪ್ರಿಯ 'ಧುರಂದರ್' ಸಿನಿಮಾವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ. ಪಾಕ್ ವಿರೋಧಿ ನಿಲುವಿನಿಂದಾಗಿ ಪಾಕಿಸ್ತಾನದ ಅನೇಕ ರಾಜಕಾರಣಿಗಳು ಸಿನಿಮಾದ ವಿರುದ್ಧ ಕೇಸ್ ದಾಖಲಿಸುವಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ ಪಾಕಿಸ್ತಾನ ಫೀಪಲ್ಸ್ ಪಾರ್ಟಿ (PPP) ಮುಖ್ಯಸ್ಥ ಬಿಲಾವಲ್ ಭುಟ್ಟೋ ಭಾಗಿಯಾಗಿರುವ ಪಾರ್ಟಿಯೊಂದರಲ್ಲಿ ಧುರಂದರ್ ಸಿನಿಮಾದ FA9LA ಸಾಂಗ್ ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನದಲ್ಲಿ ಚಿತ್ರವನ್ನು ಬ್ಯಾನ್ ಮಾಡಿದ್ದರೂ ಬಿಲ್ವಾಲ್ ಭುಟ್ಟೋ ಹಾಜರಿದ್ದ ಕಾರ್ಯಕ್ರಮದಲ್ಲೂ ಈ ಹಾಡನ್ನು ಬಳಸಲಾಗಿದೆ. ಬಿಲ್ವಾಲ್ ಇತರ ಕೆಲ ನಾಯಕರೊಂದಿಗೆ ವೇದಿಕೆಯಲ್ಲಿರುವಾಗಲೇ ಧುರಂದರ್ ಸಿನಿಮಾದ ವೈರಲ್ ಹಾಡನ್ನು ಪ್ಲೇ ಮಾಡಲಾಗಿದೆ.
ರಣವೀರ್ ಸಿಂಗ್ ಅಭಿನಯದ ಈ ಧುರಂದರ್ ಸಿನಿಮಾದಲ್ಲಿ ಅಕ್ಷಯ್ ಖನ್ನಾ ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದಾರೆ. ಅಕ್ಷಯ್ ಖನ್ನಾ ಎಂಟ್ರಿಗೆ ಬಹ್ರೈನ್ ರ್ಯಾಪ್ ಸಿಂಗರ್ ಫ್ಲಿಪರಾಚಿ ಹಾಡಿರುವ FA9LA ಹಾಡನ್ನು ಬಳಸಲಾಗಿದೆ. ಅಕ್ಷಯ್ ಖನ್ನಾ ಸೀನ್ ಹಾಗೂ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಹೀಗಾಗಿ ಎಲ್ಲೆಡೆ ಈ ಕ್ಲಿಪ್ ವೈರಲ್ ಆಗುತ್ತಿದೆ.
ಭುಟ್ಟೋ ಅವರ PPP ಕೂಡಾ ಧುರಂದರ್ ಚಿತ್ರದ ವಿರುದ್ಧ ಕರಾಚಿ ನ್ಯಾಯಾಲಯದಲ್ಲಿ ಕಾನೂನು ಹೋರಾಟದ ಅರ್ಜಿ ಸಲ್ಲಿಸಿದೆ. ದಿವಂಗತ ಬೆನಜೀರ್ ಭುಟ್ಟೋ ಅವರ ಫೋಟೋ ಬಳಸಿರುವುದನ್ನು ಪ್ರಶ್ನಿಸಿದೆ. ಧುರಂಧರ ಚಿತ್ರದ ಪಾತ್ರವರ್ಗ ಮತ್ತು ತಂಡದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಮಧ್ಯೆ ಬಿಲಾವಲ್ ಭುಟ್ಟೋ ಭಾಗಿಯಾಗಿರುವ ಪಾರ್ಟಿಯೊಂದರಲ್ಲಿ FA9LA ಸಾಂಗ್ ಹಾಕಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
Advertisement