ಸಿನಿಮಾ ಚಿತ್ರೀಕರಣದ ವೇಳೆ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ, ಆಸ್ಪತ್ರೆಗೆ ದಾಖಲು

ಮುಂಬೈನ ಫಿಲ್ಮ್ ಸಿಟಿಯಲ್ಲಿ ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಎಂಬ ಚಿತ್ರದ ಸಾಹಸ ಚಿತ್ರೀಕರಣದ ಸಮಯದಲ್ಲಿ ಸೂರಜ್ ಪಾಂಚೋಲಿಗೆ "ಗಂಭೀರ ಸುಟ್ಟಗಾಯಗಳಾಗಿವೆ" ಎಂದು ವರದಿಯಾಗಿದೆ.
ಸೂರಜ್ ಪಾಂಚೋಲಿ
ಸೂರಜ್ ಪಾಂಚೋಲಿ
Updated on

ಮುಂಬೈ: ಸೂರಜ್ ಪಾಂಚೋಲಿ ಅವರಿಗೆ ಮಂಗಳವಾರ ತಮ್ಮ ಮುಂಬರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಸುಟ್ಟಗಾಯಗಳಾಗಿದ್ದು, ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಮತ್ತು ನಟ ಆದಿತ್ಯ ಪಾಂಚೋಲಿ ಅವರು ತಿಳಿಸಿದ್ದಾರೆ.

ಮುಂಬೈನ ಫಿಲ್ಮ್ ಸಿಟಿಯಲ್ಲಿ ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಎಂಬ ಚಿತ್ರದ ಸಾಹಸ ಚಿತ್ರೀಕರಣದ ಸಮಯದಲ್ಲಿ ಸೂರಜ್ ಪಾಂಚೋಲಿಗೆ "ಗಂಭೀರ ಸುಟ್ಟಗಾಯಗಳಾಗಿವೆ" ಎಂದು ವರದಿಯಾಗಿದೆ.

"ಬೆಂಕಿಯ ಬಳಕೆಯನ್ನು ಒಳಗೊಂಡ ಚಿತ್ರದ ಕೆಲವು ಪ್ಯಾಚ್‌ವರ್ಕ್" ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಿರ್ಮಾಪಕರು ಹೇಳಿರುವುದಾಗಿ ಆದಿತ್ಯ ಪಾಂಚೋಲಿ ತಿಳಿಸಿದ್ದಾರೆ.

ಸೂರಜ್ ಪಾಂಚೋಲಿ
ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ನಟ ಸೂರಜ್ ಪಾಂಚೋಲಿ'ಗೆ ಬಿಗ್ ರಿಲೀಫ್​, ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು

"ಇದು ಸ್ವಲ್ಪ ನಿಯಂತ್ರಣ ತಪ್ಪಿದೆ. ಅವರಿಗೆ(ಸೂರಜ್ ಪಾಂಚೋಲಿ) ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ ಎಲ್ಲವೂ ಸರಿಯಾಗಿದೆ" ಎಂದು ಸೂರತ್‌ನಿಂದ ಆದಿತ್ಯ ಪಾಂಚೋಲಿ ಪಿಟಿಐಗೆ ತಿಳಿಸಿದ್ದಾರೆ.

ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಚಿತ್ರವನ್ನು ಪ್ರಿನ್ಸ್ ಧಿಮಾನ್ ಅವರು ನಿರ್ದೇಶಿಸುತ್ತಿದ್ದು, ಕಾನು ಚೌಹಾಣ್ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com