
ಮುಂಬೈ: ಸದ್ಯ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರು ಮುಂಬೈನ ಪ್ರತಿಷ್ಠಿತ ಪ್ರದೇಶದಲ್ಲಿ ಸುಮಾರು 2,100 ಚದರ ಅಡಿ ಕಚೇರಿ ಜಾಗವನ್ನು 8 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ಬುಧವಾರ ತಿಳಿಸಿದೆ.
"ಕರೆನ್‌ಜಿತ್ ಕೌರ್ ವೆಬರ್(ಸನ್ನಿ ಲಿಯೋನ್) ಮುಂಬೈನ ಓಶಿವಾರಾದಲ್ಲಿ 8 ಕೋಟಿ ರೂ.ಗೆ ಕಚೇರಿ ಸ್ಥಳವನ್ನು ಖರೀದಿಸಿದ್ದಾರೆ" ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಆಸ್ತಿಯನ್ನು ಫೆಬ್ರವರಿ 2025 ರಲ್ಲಿ ನೋಂದಾಯಿಸಲಾಗಿದೆ. ಈ ಆಸ್ತಿ ನೋಂದಣಿ ದಾಖಲೆಗಳನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲಾಗಿದೆ ಎಂದು ಸ್ಕ್ವೇರ್ ಯಾರ್ಡ್ಸ್ ಹೇಳಿದೆ.
ಕರನ್‌ಜಿತ್ ಕೌರ್ ವೆಬರ್ ಖರೀದಿಸಿದ ಈ ಆಸ್ತಿ, ವೀರ್ ಗ್ರೂಪ್‌ನ ವಾಣಿಜ್ಯ ಯೋಜನೆಯಾದ ವೀರ್ ಸಿಗ್ನೇಚರ್‌ನಲ್ಲಿದೆ.
ಕರೆನ್‌ಜಿತ್ ಕೌರ್ ವೆಬರ್ ಖರೀದಿಸಿದ ಕಚೇರಿ ಸ್ಥಳವು 176.98 ಚದರ ಮೀಟರ್ (ಸುಮಾರು 1,904.91 ಚದರ ಅಡಿ) ಕಾರ್ಪೆಟ್ ಪ್ರದೇಶವನ್ನು ಮತ್ತು 194.67 ಚದರ ಮೀಟರ್ (2,095 ಚದರ ಅಡಿ) ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದೆ.
ಆನಂದ್ ಕಮಲನಾಯನ್ ಪಂಡಿತ್ ಮತ್ತು ರೂಪಾ ಆನಂದ್ ಪಂಡಿತ್ ಒಡೆತನದ ಐಶ್ವರ್ಯಾ ಪ್ರಾಪರ್ಟಿ ಅಂಡ್ ಎಸ್ಟೇಟ್ಸ್‌ನಿಂದ ಸನ್ನಿ ಲಿಯೋನ್ ಕಚೇರಿ ಸ್ಥಳವನ್ನು ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
Advertisement