ಎಮರ್ಜೆನ್ಸಿ ಚಿತ್ರದ ಪೋಸ್ಟರ್
ಬಾಲಿವುಡ್
ಮಾರ್ಚ್ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ 'ಎಮರ್ಜೆನ್ಸಿ' ಬಿಡುಗಡೆ: ಕಂಗನಾ
ಕಂಗನಾ ರನೌತ್ ಅವರು ನಿರ್ದೇಶಿಸಿ ನಿರ್ಮಿಸಿ, ಅಭಿನಯಿಸಿದ ಈ ಚಿತ್ರವು ತುರ್ತು ಪರಿಸ್ಥಿತಿಯ ಕಥಾ ಹಂದರವನ್ನು ಹೊಂದಿದೆ.
ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರನೌತ್ ಅವರು ತಮ್ಮ "ಎಮರ್ಜೆನ್ಸಿ" ಚಿತ್ರ ಮಾರ್ಚ್ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಶುಕ್ರವಾರ ಘೋಷಿಸಿದ್ದಾರೆ.
ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ ಎಂಬ ಆರೋಪದ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಈ ಚಿತ್ರ ಹಲವಾರು ಅಡೆತಡೆಗಳ ನಡುವೆ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಂಗನಾ ರನೌತ್ ಅವರು ನಿರ್ದೇಶಿಸಿ ನಿರ್ಮಿಸಿ, ಅಭಿನಯಿಸಿದ ಈ ಚಿತ್ರವು ತುರ್ತು ಪರಿಸ್ಥಿತಿಯ ಕಥಾ ಹಂದರವನ್ನು ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದಾರೆ.
ಇಂದಿರಾ ಗಾಂಧಿಯವರ ಹಳೆಯ ಚಿತ್ರದ ಜೊತೆಗೆ 'ಎಮರ್ಜೆನ್ಸಿ' ಚಿತ್ರದ ಸ್ಟಿಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಂಗನಾ, "ಮಾರ್ಚ್ 17 ರಂದು @netflix ನಲ್ಲಿ ಬಿಡುಗಡೆಯಾಗುತ್ತಿದೆ. ಹಿಮಾಚಲ ಪ್ರದೇಶದ ಮಂಡಿ ಬಿಜೆಪಿ ಸಂಸದೆ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ