Kangana Ranauth
ಕಂಗನಾ ರನೌತ್

ಇಂದಿರಾ ಗಾಂಧಿ ಪವರ್ ಫುಲ್ ಲೀಡರ್ ಎಂದು ಭಾವಿಸಿದ್ದೆ, ಆದರೆ 'ಎಮರ್ಜೆನ್ಸಿ' ನಂತರ ಆಕೆ ದುರ್ಬಲರು ಎಂದು ಗೊತ್ತಾಯ್ತು: ಕಂಗನಾ ರನೌತ್

'ಎಮರ್ಜೆನ್ಸಿ' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂಬ ಆರೋಪಗಳ ಕುರಿತು ತಿಂಗಳುಗಳ ಕಾಲ ವಿವಾದ ಏರ್ಪಟ್ಟ ನಂತರ ಇದೀಗ ಜನವರಿ 17 ರಂದು ಬಿಡುಗಡೆಯಾಗಲಿದೆ.
Published on

ಮುಂಬೈ: ತಮ್ಮ ಹೊಸ ಚಿತ್ರ "ಎಮರ್ಜೆನ್ಸಿ"ಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿರುವ ನಟಿ ಹಾಗೂ ಸಂಸದೆ ಕಂಗನಾ ರನೌತ್ ದೇಶದ ಮೊದಲ ಮಹಿಳಾ ಪ್ರಧಾನಿ ಬಗ್ಗೆ ಕುತೂಹಲಕರ ವಿಚಾರ ಹೇಳಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕಾಗಿ ತಾವು ಸಾಕಷ್ಟು ಸಂಶೋಧನೆ ಮಾಡಿದ್ದು, ಇಂದಿರಾ ಗಾಂಧಿಯವರು ಅಷ್ಟು ಪ್ರಬಲವಾಗಿರಲಿಲ್ಲ. ದುರ್ಬಲವಾಗಿದ್ದು, ತಮ್ಮ ಬಗ್ಗೆ ತಮಗೇ ಅವರಿಗೆ ಖಚಿತತೆ ಇರಲಿಲ್ಲ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಮೊದಲ ಬಾರಿಗೆ ಸಂಸದೆಯಾಗಿರುವ, ಆಗಾಗ್ಗೆ ತಮ್ಮ ಪ್ರಚೋದನಕಾರಿ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುವ ಕಂಗನಾ ರನೌತ್, ಇಂದು ನನಗೆ ನಿರ್ದೇಶನ ಮಾಡಲು ಅರ್ಹರಾದ ನಿರ್ದೇಶಕರು ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇಂದು ಚಲನಚಿತ್ರೋದ್ಯಮದಲ್ಲಿ ನಾನು ಕೆಲಸ ಮಾಡಲು ಬಯಸುವ ಒಬ್ಬ ನಿರ್ದೇಶಕರೂ ಇಲ್ಲ. ಅವರು ನನಗೆ ನಿರ್ದೇಶನ ಮಾಡಲು ಅರ್ಹರು ಎಂದು ನಾನು ಭಾವಿಸುವ ಗುಣಮಟ್ಟವನ್ನು ಹೊಂದಿಲ್ಲ ಎಂದು ರನೌತ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಹೇಳಿದರು.

Kangana Ranauth
"ಬರೀ ಅರ್ಥವಿಲ್ಲದ ಮಾತು": ರಾಹುಲ್ ಬಗ್ಗೆ ಕಂಗನಾ ರನೌತ್ ಲೇವಡಿ

1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ 21 ತಿಂಗಳ ತುರ್ತು ಪರಿಸ್ಥಿತಿಯನ್ನು ದಾಖಲಿಸುವ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿರುವ ರನೌತ್, ಇಂದಿರಾ ಗಾಂಧಿ ಬಗ್ಗೆ ನನಗೆ ಸಹಾನುಭೂತಿ ಇದೆ. ಈ ಪಾತ್ರದಲ್ಲಿ ನಟಿಸುವವರೆಗೂ ಇಂದಿರಾ ಗಾಂಧಿ ಅವರು ತುಂಬಾ ಶಕ್ತಿಶಾಲಿ ಎಂದು ಪರಿಗಣಿಸಿದ್ದೆ. ಆದರೆ ನಾನು ನನ್ನ ಸಂಶೋಧನೆ ಮಾಡಿದಾಗ, ಅದು ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ನನಗೆ ಅರ್ಥವಾಯಿತು. ನೀವು ದುರ್ಬಲರಾಗಿದ್ದಷ್ಟೂ, ನೀವು ಹೆಚ್ಚು ನಿಯಂತ್ರಣವನ್ನು ಬಯಸುತ್ತೀರಿ ಎಂಬ ನನ್ನ ನಂಬಿಕೆಯನ್ನು ಅದು ಬಲಪಡಿಸಿತು. ಇಂದಿರಾ ಗಾಂಧಿಯವಕು ತುಂಬಾ ದುರ್ಬಲ ವ್ಯಕ್ತಿ, ಅವರಿಗೆ ತಮ್ಮ ಬಗ್ಗೆ ಖಚಿತತೆ ಇರಲಿಲ್ಲ ಎಂದಿದ್ದಾರೆ.

ಇಂದಿರಾ ಗಾಂಧಿ ತಮ್ಮ ಸುತ್ತ ಊರುಗೋಲು ಹೊಂದಿದ್ದರು. ನಿರಂತರವಾಗಿ ಒಂದು ರೀತಿಯ ದೃಢೀಕರಣವನ್ನು ಬಯಸುತ್ತಿದ್ದರು, ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಿದ್ದರು, ಅವರಲ್ಲಿ ಒಬ್ಬರು ಸಂಜಯ್ ಗಾಂಧಿ, ಎಮರ್ಜೆನ್ಸಿ ಗೆ ಮೊದಲು ನನಗೆ ಅವರ ಬಗ್ಗೆ ಸಹಾನುಭೂತಿ ಇರಲಿಲ್ಲ, ಆದರೆ ಸಿನಿಮಾ ಮಾಡಿ ಮುಗಿಸಿದ ನಂತರ ನನ್ನ ಅಭಿಪ್ರಾಯ ಬದಲಾಗಿದೆ ಎಂದರು.

Kangana Ranauth
ಭಾರತ ಹಿಂದೂ ರಾಷ್ಟ್ರವಾಗಬೇಕು: ಕಂಗನಾ ರನೌತ್

ಇಂದಿರಾ ಗಾಂಧಿಯವರ ಮೊಮ್ಮಗಳು, ಸಹ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಂಸತ್ತಿನಲ್ಲಿ ಭೇಟಿಯಾಗಿ ಚಿತ್ರದ ಬಗ್ಗೆ ಪ್ರಸ್ತಾಪಿಸಿದೆ. ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು ನನ್ನ ಕೆಲಸ ಮತ್ತು ನನ್ನ ಕೂದಲಿನ ಬಗ್ಗೆ ಶ್ಲಾಘಿಸಿದರು. ನಾನು ಎಮರ್ಜೆನ್ಸಿ ಎಂಬ ಚಿತ್ರ ಮಾಡಿದ್ದೇನೆ, ನೀವು ಅದನ್ನು ನೋಡಬೇಕು ಎಂದು ಹೇಳಿದೆ. ಅದಕ್ಕೆ ಅವರು ಬಹುಶಃ ನೋಡುತ್ತೇನೆ ಎಂದು ಹೇಳಿದರು ಎಂದು ಪ್ರಿಯಾಂಕಾ ಗಾಂಧಿ ಜೊತೆಗಿನ ಭೇಟಿ ಬಗ್ಗೆ ತಿಳಿಸಿದರು.

ಜನರನ್ನು, ಅವರ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿಲ್ಲ. ಚಿತ್ರವನ್ನು ಆ ಉದ್ದೇಶದಿಂದ ನಿರ್ಮಿಸಲಾಗಿಲ್ಲವಾದ್ದರಿಂದ, ಸೆನ್ಸಾರ್ ನಲ್ಲಿ ಕೆಲವೊಂದು ದೃಶ್ಯಗಳನ್ನು ಕತ್ತರಿಸಿದರೂ ಕೂಡ ಅದು ನನ್ನ ಕಥೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

'ಎಮರ್ಜೆನ್ಸಿ' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂಬ ಆರೋಪಗಳ ಕುರಿತು ತಿಂಗಳುಗಳ ಕಾಲ ವಿವಾದ ಏರ್ಪಟ್ಟ ನಂತರ ಇದೀಗ ಜನವರಿ 17 ರಂದು ಬಿಡುಗಡೆಯಾಗಲಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಸೆಪ್ಟೆಂಬರ್ 6, 2024 ರಂದು ಬಿಡುಗಡೆಯಾಗಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com