
ನವದೆಹಲಿ: ಕೆಲವು ವರ್ಷಗಳ ಹಿಂದೆ ನಟಿ ಇಶಾ ಗುಪ್ತಾ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಾಗ ನಟಿ ಈ ವದಂತಿಗಳ ಕುರಿತು ಮಾತನಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ನಟಿ-ಮಾಡೆಲ್ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒರ್ವ ಮಗನಿದ್ದಾನೆ. ಆದರೆ, ಕಳೆದ ವರ್ಷ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಾವು ವಿಚ್ಛೇಧನ ಪಡೆದಿರುವುದಾಗಿ ಘೋಷಿಸಿದರು.
ಸಂದರ್ಶನದ ಸಮಯದಲ್ಲಿ ಇಶಾ, ಆಗ ಸಂಬಂಧವೊಂದರ ಸಾಧ್ಯತೆ ಇತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
'ಹೌದು, ನಾವು ಸ್ವಲ್ಪ ಸಮಯದಿಂದ ಮಾತನಾಡುತ್ತಿದ್ದೆವು. ನಾವು ಡೇಟಿಂಗ್ ಮಾಡುತ್ತಿರಲಿಲ್ಲ ಅಂತ ನನಗನ್ನಿಸುತ್ತೆ. ಆದರೆ ಹೌದು, ನಾವು ಎರಡು ತಿಂಗಳು ಮಾತನಾಡುತ್ತಿದ್ದೆವು. 'ಬಹುಶಃ ಅದು ಆಗಬಹುದು ಅಥವಾ ಆಗದೇ ಇರಬಹುದು' ಎಂಬ ಹಂತದಲ್ಲಿ ನಾವಿಬ್ಬರೂ ಇದ್ದೆವು. ನಾವು ಡೇಟಿಂಗ್ ಹಂತ ತಲುಪುವ ಮೊದಲೇ ಅದು ಕೊನೆಗೊಂಡಿತು. ಹಾಗಾಗಿ ಅದು ಡೇಟಿಂಗ್ ಅಲ್ಲ. ನಾವು ಒಂದು ಅಥವಾ ಎರಡು ಬಾರಿ ಭೇಟಿಯಾದೆವು, ಅಷ್ಟೇ. ಹೌದು, ನಾನು ಹೇಳಿದಂತೆ, ಅದು ಎರಡು ತಿಂಗಳು ನಡೆಯಿತು ಮತ್ತು ನಂತರ ಕೊನೆಗೊಂಡಿತು' ಎಂದು ಹೇಳಿದರು.
ಆಗ ಇಬ್ಬರ ನಡುವೆ ಸಂಬಂಧ ಚಿಗುರೊಡೆಯಲು ಸಾಧ್ಯವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ಯಾವುದೇ ಸಂಘರ್ಷ, ನಾಟಕ ಅಥವಾ ಕಠಿಣ ಭಾವನೆಗಳು ಇರಲಿಲ್ಲ. ಏಕೆಂದರೆ, ಆ ಸಂಬಂಧವು ಮೂಡಿಯೇ ಇರಲಿಲ್ಲ ಎಂದರು.
2019ರಲ್ಲಿ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಭಾಗವಹಿಸಿದ್ದಾಗ ಹಾರ್ದಿಕ್ ಪಾಂಡ್ಯ ಅವರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಟೀಕಿಸಿದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಇಶಾ ಗುಪ್ತಾ ಕೂಡ ಒಬ್ಬರು. ಆದಾಗ್ಯೂ, ಆ ಘಟನೆಯ ಸಮಯದಲ್ಲಿ ಇಶಾ ಗುಪ್ತಾ ಅವರು ಸ್ಟಾರ್ ಕ್ರಿಕೆಟಿಗನೊಂದಿಗೆ ಸಂಪರ್ಕದಲ್ಲಿರಲಿಲ್ಲ.
ಈಶಾ ಕೊನೆಯ ಬಾರಿಗೆ MX ಪ್ಲೇಯರ್‌ನಲ್ಲಿ ತೆರೆಕಂಡ ಬಾಬಿ ಡಿಯೋಲ್ ಜೊತೆಗೆ ಏಕ್ ಬದ್ನಾಮ್ ಆಶ್ರಮ 3 ಭಾಗ 2 ರಲ್ಲಿ ಕಾಣಿಸಿಕೊಂಡಿದ್ದರು. ಒನ್ ಡೇ: ಜಸ್ಟೀಸ್ ಡೆಲಿವರ್ಡ್ ಚಿತ್ರದಲ್ಲಿ ಡಿಸಿಪಿ ಲಕ್ಷ್ಮಿ ರಾಠಿ ಪಾತ್ರವನ್ನೂ ನಿರ್ವಹಿಸಿದರು.
Advertisement