
ನಟಿ ಸಮಂತಾ ರುತ್ ಪ್ರಭು ಇತ್ತೀಚೆಗಷ್ಟೇ 'ಸಿಟಾಡೆಲ್: ಹನಿ ಬನ್ನಿ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಸರಣಿಯನ್ನು ರಾಜ್ ನಿಡಿಮೋರು ನಿರ್ದೇಶಿಸಿದ್ದರು. ಸಮಂತಾ ನಟನೆಗೆ ಬಾರಿ ಮೆಚ್ಚುಗೆ ವ್ಯಕ್ತವಾಯಿತಾದರೂ ನಟಿ ಸುದ್ದಿಯಾಗಿದ್ದು ಮಾತ್ರ ಬೇರೆ ಕಾರಣಕ್ಕೆ. ಸಿಟಾಡೆಲ್ ನಿರ್ದೇಶಕ ರಾಜ್ ನಿಡಿಮೋರು ಮತ್ತು ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಡಿದ್ದು, ಈ ವದಂತಿಗಳಿಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಮಂತಾ ಆಗ್ಗಾಗ್ಗೆ ರಾಜ್ ನಿಡಿಮೋರು ಜೊತೆಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವುದು ವದಂತಿಗಳಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ. ಈಮಧ್ಯೆ, ರಾಜ್ ನಿಡಿಮೋರು ಅವರ ಪತ್ನಿ ಶ್ಯಾಮಲಿ ದೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಮತ್ತೊಂದು ನಿಗೂಢ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಚರ್ಚೆಗೆ ಕಾರಣವಾಗಿದೆ.
ಶ್ಯಾಮಲಿ ದೇ 'ಒಳ್ಳೆಯ ಕರ್ಮವನ್ನು ರಚಿಸಿ. ಜನರಿಗೆ ಸಹಾಯ ಮಾಡಿ ಮತ್ತು ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಿ' ಎಂದು ಬರೆದಿದ್ದಾರೆ. ಶ್ಯಾಮಲಿ ದೇ ಈ ಹಿಂದೆಯೂ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಕಳೆದ ವಾರ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, 'ನನ್ನ ಬಗ್ಗೆ ಯೋಚಿಸುವ, ನೋಡುವ, ಕೇಳುವ, ನನ್ನ ಮಾತನ್ನು ಕೇಳುವ, ನನ್ನೊಂದಿಗೆ ಮಾತನಾಡುವ, ನನ್ನ ಬಗ್ಗೆ ಮಾತನಾಡುವ, ನನ್ನ ಬಗ್ಗೆ ಓದುವ, ನನ್ನ ಬಗ್ಗೆ ಬರೆಯುವ ಮತ್ತು ಇಂದು ನನ್ನನ್ನು ಭೇಟಿಯಾಗುವ ಪ್ರತಿಯೊಬ್ಬರಿಗೂ ನಾನು ಆಶೀರ್ವಾದ ಮತ್ತು ಪ್ರೀತಿಯನ್ನು ಕಳುಹಿಸುತ್ತೇನೆ' ಎಂದು ಬರೆದಿದ್ದರು.
ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಇಂಟರ್ನೆಟ್ ಬಳಕೆದಾರರು ರಾಜ್ ಮತ್ತು ಸಮಂತಾ ಅವರ ಡೇಟಿಂಗ್ ವದಂತಿಯನ್ನು ಸೂಕ್ಷ್ಮವಾಗಿ ಟೀಕಿಸಿದ್ದಾರೆಂದು ಭಾವಿಸಿದರು.
ರಾಜ್ ಮತ್ತು ಸಮಂತಾ ಅವರ ಡೇಟಿಂಗ್ ವದಂತಿಯು ರಾಜ್ ನಿಡಿಮೋರು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಿದೆ. ದಂಪತಿ ಸಂಬಂಧದಲ್ಲಿದ್ದಾರೆಯೇ ಅಥವಾ ಬೇರ್ಪಟ್ಟಿದ್ದಾರೆಯೇ ಎಂಬ ಕುರಿತು ದೃಢೀಕರಣವಾಗಿಲ್ಲ.
ವರದಿಗಳು ಸೂಚಿಸುವಂತೆ, ದಂಪತಿ 2022 ರಲ್ಲಿ ಬೇರ್ಪಟ್ಟಿದ್ದರು. ಆದರೆ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಸಮಂತಾ ಈ ಹಿಂದೆ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಅವರು 2021 ರಲ್ಲಿ ವಿಚ್ಛೇದನ ಘೋಷಿಸಿದರು. ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಕಳೆದ ವರ್ಷ ಡಿಸೆಂಬರ್ 4 ರಂದು ವಿವಾಹವಾದರು.
Advertisement