ಬಾಲಿವುಡ್ ದಂತಕಥೆ ಧರ್ಮೇಂದ್ರ ನಿಧನ: 'ಶೋಲೆ' ಸಹನಟ, ಗೆಳೆಯನ ಬಗ್ಗೆ ಅಮಿತಾಬ್ ಬಚ್ಚನ್ ಭಾವನಾತ್ಮಕ ಸಾಲುಗಳು...
ಹೆಚ್ಚಿನ ಸಂಬಂಧಗಳು ಹೆಸರಿಗಾಗಿ ಮತ್ತು ಮೇಲ್ನೋಟಕ್ಕೆ ಮಾತ್ರ ಸೀಮಿತವಾಗಿರುವ ಸಿನಿಮಾ ಜಗತ್ತಿನಲ್ಲಿ, ಕೆಲವು ಅಪರೂಪದ ಬಂಧಗಳು ತೆರೆಯ ಮೇಲಿನ ಜೋಡಿಗಳಿಂದ ನಿಜ ಜೀವನದಲ್ಲಿ ಹೆಚ್ಚು ಆಪ್ತರಾಗಿ ಸುದ್ದಿಯಲ್ಲಿರುತ್ತಾರೆ. ಅಂತಹುದೇ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರದ್ದು.
ಹಿಂದಿ ಚಿತ್ರರಂಗದ ಅತ್ಯಂತ ಪ್ರೀತಿಯ ತಾರೆಯರಲ್ಲಿ ಒಬ್ಬರಾದ ಧರ್ಮೇಂದ್ರ ಅವರ ನಿಧನಕ್ಕೆ ಚಲನಚಿತ್ರೋದ್ಯಮ ಶೋಕಿಸುತ್ತಿರುವಾಗ, ಇಡೀ ಉದ್ಯಮ ಮತ್ತು ಧರ್ಮೇಂದ್ರ ಅವರ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.
ಬಾಲಿವುಡ್ ನ ಹಿ-ಮ್ಯಾನ ಎಂದೂ ಕರೆಯಲ್ಪಡುವ ಧರ್ಮೇಂದ್ರ, ವಯೋಸಹದ ಆರೋಗ್ಯ ಸಮಸ್ಯೆಗಳಿಂದ ಜುಹುವಿನ ತಮ್ಮ ನಿವಾಸದಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿರ್ಗಮನವು ಚಿತ್ರರಂಗದಲ್ಲಿ ಮಾತ್ರವಲ್ಲದೆ, ಅವರನ್ನು ನೋಡುತ್ತಾ ಬೆಳೆದ ಲಕ್ಷಾಂತರ ಜನರ ಹೃದಯಗಳಲ್ಲಿಯೂ ಶೂನ್ಯವನ್ನುಂಟುಮಾಡಿದೆ. ಅವರ ಅತ್ಯಾಪ್ತ ಬಾಲಿವುಡ್ ದಿಗ್ಗಜ, ಅಮಿತಾಬ್ ಬಚ್ಚನ್ ಅವರ ಗೌರವವು ಸಹನಟ, ಸಹೋದರ ಮತ್ತು ಆತ್ಮೀಯ ಸ್ನೇಹಿತರಿಗೆ ಭಾವನಾತ್ಮಕ ವಿದಾಯವಾಗಿ ಎದ್ದು ಕಾಣುತ್ತದೆ.
ನವೆಂಬರ್ 1 ರಿಂದ ಧರ್ಮೇಂದ್ರ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲ ದಿನ ಇದ್ದು ನಂತರ ಅವರ ಕುಟುಂಬ ವರ್ಗ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದು ನೋಡಿಕೊಳ್ಳುತ್ತಿದ್ದರು. ಅವರ ಅಂತ್ಯಕ್ರಿಯೆಯನ್ನು ನಿನ್ನೆ ಪವನ್ ಹ್ಯಾನ್ಸ್ ಸ್ಮಶಾನದಲ್ಲಿ ನಡೆಸಲಾಯಿತು,
ಅಮಿತಾಬ್ ಬಚ್ಚನ್ ಅವರ ಭಾವನಾತ್ಮಕ ವಿದಾಯ
ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಶೋಕಿಸುತ್ತಿರುವಾಗ, ಅಮಿತಾಬ್ ಬಚ್ಚನ್ ಧರ್ಮೇಂದ್ರರಿಗೆ ಭಾವನಾತ್ಮಕ ಗೌರವದ ಸಾಲುಗಳನ್ನು ಬರೆದರು. ಶೋಲೆ ಮತ್ತು ಚುಪ್ಕೆ ಚುಪ್ಕೆ ಸಹನಟನನ್ನು ನೆನಪಿಸಿಕೊಳ್ಳುತ್ತಾ, ಅಮಿತಾಬ್ ಬಚ್ಚನ್ ಹೀಗೆ ಬರೆದಿದ್ದಾರೆ:
“...ಮತ್ತೊಬ್ಬ ಧೀರ ದೈತ್ಯ ನಮ್ಮನ್ನು ಅಗಲಿದ್ದಾರೆ.. ಅಖಾಡವನ್ನು ತೊರೆದಿದ್ದಾರೆ.. ಅಸಹನೀಯ ಶಬ್ದದೊಂದಿಗೆ ಮೌನವನ್ನು ಬಿಟ್ಟು.. ಧರಮ್ ಜಿ..”
ಧರ್ಮೇಂದ್ರ ಅವರನ್ನು "ಶ್ರೇಷ್ಠತೆಯ ಪ್ರತಿರೂಪ" ಎಂದು ಕರೆದ ಅವರು, ಅವರ ಪರಂಪರೆ ಅವರ ಎತ್ತರದ ದೈಹಿಕ ಉಪಸ್ಥಿತಿಗೆ ಮಾತ್ರವಲ್ಲದೆ "ಅವರ ಹೃದಯದ ವಿಶಾಲತೆ ಮತ್ತು ಅದರ ಅತ್ಯಂತ ಪ್ರೀತಿಯ ಸರಳತೆಗೂ ಸಂಬಂಧಿಸಿದೆ ಎಂದು ಬರೆದಿದ್ದಾರೆ.
ಅವರ ನಗು, ಅವರ ಮೋಡಿ ಮತ್ತು ಅವರ ಪ್ರೀತಿ, ಅವರ ಸುತ್ತಮುತ್ತಲಿನ ಎಲ್ಲದಕ್ಕೂ ವಿಸ್ತರಿಸುತ್ತದೆ .. ವೃತ್ತಿಯಲ್ಲಿ ಅಪರೂಪದ ವ್ಯಕ್ತಿತ್ವ... ಇಂದು ನಮ್ಮ ಸುತ್ತಲಿನ ಗಾಳಿ ಖಾಲಿಯಾಗಿ ತಿರುಗುತ್ತಿದೆ, ಎಂದಿಗೂ ಶೂನ್ಯವಾಗಿ ಉಳಿಯುವ ನಿರ್ವಾತ.. ಸದ್ಗತಿ ಸಿಗಲಿ" ಎಂದು ಕವಿಹೃದಯಿಯ ಸಾಲುಗಳನ್ನು ತನ್ನ ಸ್ನೇಹಿತನಿಗೆ ಬರೆದಿದ್ದಾರೆ.
ಧರ್ಮೇಂದ್ರ ಅವರ ಕೊನೆಯ ಚಿತ್ರ ಇಕ್ಕಿಸ್, ಅಗಸ್ತ್ಯ ನಂದಾ ಮತ್ತು ಜೈದೀಪ್ ಅಹ್ಲಾವತ್ ನಟಿಸಿದ್ದು, ಈ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.


