

ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 4 ತಿಂಗಳ ನಂತರ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಜೊತೆಗೆ, ಮಗುವಿನ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಫೋಟೋ ಹಂಚಿಕೊಂಡಿರುವ ಕಿಯಾರಾ ಮತ್ತು ಸಿದ್ಧಾರ್ಥ್, ಫೋಟೋದಲ್ಲಿ ತಮ್ಮ ಮಗಳ ಪಾದಗಳನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ.
ವಿಶೇಷವೆಂದರೆ ಕಿಯಾರಾ ಅಡ್ವಾಣಿ ಅವರು ಗರ್ಭಿಣಿ ಎಂದು ಘೋಷಿಸುವಾಗ ಹಂಚಿಕೊಂಡಿದ್ದ ಸಾಕ್ಸ್‌ಗಳನ್ನೇ ಮಗು ಈ ಫೋಟೋದಲ್ಲಿ ಧರಿಸಿರುವುದು ಕಂಡು ಬಂದಿದೆ.
ಫೋಟೋ ಜೊತೆಗೆ ದಂಪತಿ ತಮ್ಮ ಮಗುವಿನ ಸುಂದರವಾದ ಹೆಸರನ್ನೂ ಕೂಡ ಬಹಿರಂಗಪಡಿಸಿದ್ದಾರೆ. ಸ್ಟಾರ್ ದಂಪತಿಗಳು ತಮ್ಮ ಪುತ್ರಿಗೆ `ಸರಾಯಾ’ ಎಂದು ಹೆಸರಿಟ್ಟಿದ್ದಾರೆ.
ನಮ್ಮ ಪ್ರಾರ್ಥನೆಯಿಂದ, ನಮ್ಮ ತೋಳುಗಳಿಗೆ, ನಮ್ಮ ದೈವಿಕ ಆಶೀರ್ವಾದ, ನಮ್ಮ ರಾಜಕುಮಾರಿ. ಸರಾಯಾ ಮಲ್ಹೋತ್ರಾ' ಎಂದು ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ಈ ಹೆಸರು ಅರೇಬಿಕ್ ಮತ್ತು ಹೀಬ್ರೂ ಮೂಲಗಳಿಂದ ಬಂದಿದೆ ಎನ್ನಲಾಗುತ್ತಿದ್ದು. ಅರೇಬಿಕ್ ಭಾಷೆಯಲ್ಲಿ ಸರಾಯಾಹ್ ಎಂದರೆ "ರಾಜಕುಮಾರಿ", "ಉದಾತ್ತ ಮಹಿಳೆ", "ಅರಮನೆ" ಅಥವಾ "ಉದಾತ್ತ ವಾಸಸ್ಥಾನ" ಎಂದರ್ಥ.
ಕೆಲ ಮೂಲಗಳು ಈ ಹೆಸರನ್ನು "ರಾತ್ರಿಯ ಮೋಡಗಳು" ಎಂದು ಕೂಡಾ ಹೇಳಿವೆ. ಹೀಬ್ರೂ ಭಾಷೆಯಲ್ಲಿ, ಸಾರಾ ಎಂದರೆ ರಾಜಕುಮಾರಿ ಮತ್ತು ಯಾಹ್ ಪದದೊಂದಿಗೆ "ದೇವರ ರಾಜಕುಮಾರಿ" ಎಂದು ಅರ್ಥೈಸಬಹುದಾಗಿದೆ.
ಇನ್ನು ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.
Advertisement