ನನ್ನನ್ನು ಕೋಣೆಗೆ ಕರೆದು, ನನ್ನ ಕೈ ಹಿಡಿದು...: ದಕ್ಷಿಣದ ಸಿನಿಮಾ ನಿರ್ಮಾಪಕನ ಬಗ್ಗೆ ಕನ್ನಡದ 'ಭದ್ರಾ' ನಟಿ ಡೈಸಿ ಶಾ ಶಾಕಿಂಗ್ ಹೇಳಿಕೆ!

ಕನ್ನಡದ ಭದ್ರ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ನಡೆಸಿದ್ದ ಡೈಸಿ ನಂತರ ಸಲ್ಮಾನ್ ಖಾನ್ ಅಭಿನಯದ ಜೈ ಹೋ (2014) ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಹೇಟ್ ಸ್ಟೋರಿ 3 (2015) ನಂತಹ ಚಿತ್ರಗಳಲ್ಲಿ ನಟಿಸಿದರು.
Salman Khan-Daisy Shah
ಸಲ್ಮಾನ್ ಖಾನ್-ಡೈಸಿ ಶಾ
Updated on

ಬಾಲಿವುಡ್ ನಟಿ ಡೈಸಿ ಶಾ ತಮ್ಮ ವೃತ್ತಿಜೀವನದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕುರಿತಂತೆ ಸದಾ ಸುದ್ದಿಯಲ್ಲಿರುತ್ತಾರೆ. ಪ್ರತಿಯೊಂದು ವಿಷಯದ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. 2014ರಲ್ಲಿ ಸಲ್ಮಾನ್ ಖಾನ್ ಅವರ "ಜೈ ಹೋ" ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಡೈಸಿ, ಮುಂಬೈನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಚಲನಚಿತ್ರ ನಿರ್ಮಾಪಕರೊಬ್ಬರು ಆಡಿಷನ್‌ಗಾಗಿ ಮುಂಬೈಗೆ ಬಂದಾಗ ಈ ಘಟನೆ ನಡೆಯಿತು.

ದಿ ಫ್ರೀ ಪ್ರೆಸ್ ಜರ್ನಲ್ ಗೆ ಡೈಸಿ ಶಾ ಸಂದರ್ಶನ ನೀಡಿದರು. ನಟಿ ತನಗೆ ಸಂಭವಿಸಿದ ಅತ್ಯಂತ ಮುಜುಗರದ ಘಟನೆಯನ್ನು ವಿವರಿಸಿದರು. ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರೊಬ್ಬರು ನನ್ನನ್ನು ಅನುಚಿತವಾಗಿ ಮುಟ್ಟಿದರು. ಅವರು ಪಾತ್ರವರ್ಗಕ್ಕಾಗಿ ಮುಂಬೈಗೆ ಬಂದಿದ್ದರು. ನಮ್ಮಲ್ಲಿ ಆರು ಅಥವಾ ಏಳು ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೇವು. ಅವರು ಒಬ್ಬೊಬ್ಬರನ್ೇ ಪ್ರತ್ಯೇಕವಾಗಿ ಭೇಟಿ ಮಾಡಿದರು. ಆದರೆ ನನಗೆ ಅದು ಇಷ್ಟವಾಗಲಿಲ್ಲ ಏಕೆಂದರೆ ಅವರು ನನ್ನನ್ನು ಮುಟ್ಟಿದರು ಮತ್ತು ನನ್ನ ಕೈ ಹಿಡಿದರು.

Salman Khan-Daisy Shah
ಚಿರಾಗ್ ಪಾಸ್ವಾನ್ ಜೊತೆ ರೊಮ್ಯಾನ್ಸ್ ವದಂತಿ; 'ಹಾಗಿದ್ದರೆ ಇಷ್ಟೊತ್ತಿಗೆ ಮಕ್ಕಳಾಗಿರುತ್ತಿದ್ದವು' ಎಂದ ಕಂಗನಾ!

ನನಗೆ ಮುಟ್ಟಿಸಿಕೊಳ್ಳುವುದೆಂದರೇ ಆಗಲ್ಲ. ಹೀಗಾಗಿ ನಾನು ಮಸಾಜ್ ಸಹ ಮಾಡಿಸಿಕೊಳ್ಳುವುದಿಲ್ಲ. ಹೀಗಿದ್ದಾಗ ಅವರು ನನ್ನನ್ನು ಮುಟ್ಟಿ ಮಾತನಾಡಿದರು. ಆಗ 'ನಾನು ನಿನ್ನೊಂದಿಗೆ ನಂತರ ಮಾತನಾಡುತ್ತೇನೆ ಎಂದು ಹೇಳಿದೆ. ಆದರೆ ನಾನು ಅವನೊಂದಿಗೆ ಮತ್ತೆ ಮಾತನಾಡಲಿಲ್ಲ ಎಂದ ಡೈಸಿ ಶಾ, ತಾವು ಆರೋಪ ಮಾಡುತ್ತಿರುವ ನಿರ್ಮಾಪಕರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಡೈಸಿ ಶಾ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟನೆಗೆ ಪ್ರವೇಶಿಸುವ ಮೊದಲು, ಅವರು ಹಲವಾರು ಬಾಲಿವುಡ್ ಹಾಡುಗಳಲ್ಲಿ ಹಿನ್ನೆಲೆ ನರ್ತಕಿಯಾಗಿ ಕೆಲಸ ಮಾಡಿದರು. ಕನ್ನಡದ ಭದ್ರ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ನಡೆಸಿದ್ದ ಡೈಸಿ ನಂತರ ಸಲ್ಮಾನ್ ಖಾನ್ ಅಭಿನಯದ ಜೈ ಹೋ (2014) ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಹೇಟ್ ಸ್ಟೋರಿ 3 (2015) ನಂತಹ ಚಿತ್ರಗಳಲ್ಲಿ ನಟಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com