'ನಮ್ಮಮ್ಮ ಶರ್ಮಿಳಾ ಇಸ್ಲಾಂ ಬೋಧಿಸುತ್ತಿದ್ದರು, ನಾವು ಹಿಂದೂ ಧರ್ಮ ಪಾಲಿಸಲಿಲ್ಲ; ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎನ್ನುತ್ತೇನೆ'

ನಾನು ಆಧ್ಯಾತ್ಮಿಕಳಾಗಿದ್ದೇನೆ ಏಕೆಂದರೆ ನಾನು ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎಂದೇ ಕರೆಯುತ್ತೇನೆ. ಹಾಗಂದ ಮಾತ್ರಕ್ಕೆ ನಾನು ಇತರ ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ ಎಂದು ಸಬಾ ಸ್ಪಷ್ಟಪಡಿಸಿದ್ದಾರೆ.
Sharmila Tagore  with family
ಕುಟುಂಬದೊಂದಿಗೆ ಶರ್ಮಿಳಾ ಟಾಗೋರ್
Updated on

ಮುಂಬಯಿ: ಬಾಲಿವುಡ್‌ನ ನಟಿ ಶರ್ಮಿಳಾ ಟಾಗೋರ್ ಹಾಗೂ ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಕುಟುಂಬದ ಕುರಿತು ಸಬಾ ಪಟೌಡಿ ಮಹತ್ವದ ವಿಚಾರಗಳನ್ನುಹಂಚಿಕೊಂಡಿದ್ದಾರೆ.

ತಮ್ಮ ತಾಯಿ ಶರ್ಮಿಳಾ ಟಾಗೋರ್ ಮದುವೆಯ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ತಮ್ಮ ಮಕ್ಕಳಾದ ಸೈಫ್, ಸೋಹಾ ಹಾಗೂ ತಮಗೆ ಇಸ್ಲಾಂ ಧರ್ಮದ ಬಗ್ಗೆ ಮಾರ್ಗದರ್ಶನ ನೀಡಿದ್ದರು ಎಂದು ಸಬಾ ಪಟೌಡಿ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಬಾ, ನನ್ನ ಧರ್ಮ ಇಸ್ಲಾಂ ಎಂದು ನಾನು ಹೇಳುತ್ತೇನೆ. ನಾನು ಅದರೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು ಆಧ್ಯಾತ್ಮಿಕಳಾಗಿದ್ದೇನೆ ಏಕೆಂದರೆ ನಾನು ದೇವರ ಬಗ್ಗೆ ಯೋಚಿಸಿದಾಗಲೆಲ್ಲಾ 'ಅಲ್ಲಾ' ಎಂದೇ ಕರೆಯುತ್ತೇನೆ. ಹಾಗಂದ ಮಾತ್ರಕ್ಕೆ ನಾನು ಇತರ ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ ಎಂದು ಸಬಾ ಸ್ಪಷ್ಟಪಡಿಸಿದ್ದಾರೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಬಾ, ಅಮ್ಮ ಮತ್ತು ಅಪ್ಪ ಮದುವೆಯಾದಾಗ, ಅಮ್ಮ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಮತ್ತು ನಮಗೆ ಯಾವುದೇ ಗೊಂದಲ ಉಂಟಾಗಬಾರದು ಹಾಗೂ ಸರಿಯಾದ ಅಡಿಪಾಯ ಸಿಗಬೇಕು ಎಂಬ ಕಾರಣಕ್ಕಾಗಿ ನಮಗೆ ಇಸ್ಲಾಂ ಕುರಿತು ಮಾರ್ಗದರ್ಶನ ನೀಡಿದರು. ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ದೇವಸ್ಥಾನ ಅಥವಾ ಹಿಂದೂ ಧರ್ಮದ ಆಚರಣೆಗಳು ಇರಲಿಲ್ಲ ಎಂದು ವಿವರಿಸಿದ್ದಾರೆ.

Sharmila Tagore  with family
ಪಾನ್ ಮಸಾಲಾ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನೋಟಿಸ್; 15 ದಿನದಲ್ಲಿ ಉತ್ತರಿಸುವಂತೆ ಸೂಚನೆ

ನಮ್ಮ ತಾಯಿ ನಮಗೆ ಧರ್ಮದ ಪಾಠ ಕಲಿಸಿದ ಬಗ್ಗೆ ಮಾತನಾಡುತ್ತಾ, ಅಮ್ಮನೇ ನನಗೆ ನನ್ನ ನಂಬಿಕೆಯನ್ನು ಕಲಿಸಿಕೊಟ್ಟರು ಮತ್ತು ಇಸ್ಲಾಂ, ರಂಜಾನ್ ಹಾಗೂ ಇತರ ಧರ್ಮದ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಆ ನಂತರ ನಾವು ಯಾವುದನ್ನು ಅನುಸರಿಸಬೇಕು ಎಂಬುದು ಸಂಪೂರ್ಣವಾಗಿ ನಮ್ಮ ಸ್ವಂತ ಆಯ್ಕೆಯಾಗಿತ್ತು ಎಂದಿದ್ದಾರೆ. ಪೋಷಕರು ತಮ್ಮ ಮೇಲೆ ಅಥವಾ ಒಡಹುಟ್ಟಿದವರ ಮೇಲೆ ಯಾವುದೇ ಧರ್ಮವನ್ನು ಹೇರಿಲ್ಲ ಎಂಬುದನ್ನು ಸಬಾ ಹೇಳಿದ್ದಾರೆ.​

ಸೋಹದರ ಸೈಫ್ ಹಾಗೂ ತಂಗಿ ಸೋಹಾ ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಕೊಂಡಿದ್ದಾರೆ, ಹೀಗಾಗಿ ಯಾರೂ ಕೂಡ ಯಾವುದೇ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನಂಬಿಕೆ ಎಂಬುದು ಅತ್ಯಂತ ವೈಯಕ್ತಿಕವಾದದ್ದು. ಅದನ್ನು ಯಾರೂ ಯಾರ ಮೇಲೂ ಹೇರಲು ಸಾಧ್ಯವಿಲ್ಲ, ಯಾರನ್ನು ನಂಬಬೇಕು ಎಂಬುದು ಅವರವರ ಸ್ವಂತ ಆಯ್ಕೆ ಎಂದು ಸಬಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com