‘ನೇಪಾಳಿಗರೇ, ನೀವು ಒಂಟಿಯಲ್ಲ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ’: ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ನಟ ಸೋನು ಸೂದ್!

ಈ ದುಃಖದ ಸಮಯದಲ್ಲಿ ಪ್ರವಾಹ ಬಾಧಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವ ಮೂಲಕ ಖ್ಯಾತ ನಟ ಸೋನು ಸೂದ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ನೇಪಾಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಸೋನು ಸೂದ್ ಮುಂದೆ ಬಂದಿದ್ದಾರೆ.
Sonu Sood
ಬಾಲಿವುಡ್ ನಟ ಸೋನು ಸೂದ್
Updated on

ಮುಂಬೈ: ಭಾರತದ ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಪ್ರವಾಹದಿಂದ ಉಂಟಾದ ವಿನಾಶದೊಂದಿಗೆ ನೇಪಾಳವು ಹೋರಾಡುತ್ತಿದ್ದು, ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತರಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಈ ದುಃಖದ ಸಮಯದಲ್ಲಿ ಪ್ರವಾಹ ಬಾಧಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವ ಮೂಲಕ ಖ್ಯಾತ ನಟ ಸೋನು ಸೂದ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ನೇಪಾಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಸೋನು ಸೂದ್ ಮುಂದೆ ಬಂದಿದ್ದಾರೆ.

ನೇಪಾಳ ಪ್ರವಾಹದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ನೇಪಾಳದ ಜನರು ಒಂಟಿಯಲ್ಲ ಮತ್ತು ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದು ಅವರು ತಿಳಿಸಿದ್ದಾರೆ. "ನೇಪಾಳ, ನೀವು ಒಂಟಿಯಲ್ಲ. ನಾವು ಆಹಾರ, ಆಶ್ರಯ ಮತ್ತು ಪುನರ್ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ನೇಪಾಳದ ರಾಷ್ಟ್ರಧ್ವಜ ಮತ್ತು ಹೃದಯದ ಚಿಹ್ನೆಯ ಎಮೋಜಿ ಹಾಕಿದ್ದಾರೆ.

ಖ್ಯಾತ ಬಾಲಿವುಡ್ ನಟಿ ಮನೀಶಾ ಕೊಯಿರಾಲಾ ಕೂಡ ನೇಪಾಳ ಪ್ರವಾಹದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೇಪಾಳಕ್ಕಾಗಿ ಪ್ರಾರ್ಥನೆಗಳು. ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲೋಣ" ಎಂದು ಅವರು ಬರೆದುಕೊಂಡಿದ್ದಾರೆ ಮನೀಶಾ ಅವರಿಗೆ ನೇಪಾಳದೊಂದಿಗೆ ಆಳವಾದ ನಂಟಿದೆ ಎಂಬುದು ಗಮನಾರ್ಹ. ಅವರ ಮೂಲಗಳು ನೇಪಾಳದಲ್ಲಿವೆ. ಅವರ ಅಜ್ಜ ವಿಶ್ವೇಶ್ವರ ಪ್ರಸಾದ್ ಕೊಯಿರಾಲಾ ಅವರು ನೇಪಾಳದ ಮೊದಲ ಚುನಾಯಿತ ಪ್ರಧಾನ ಮಂತ್ರಿಯಾಗಿದ್ದರು. ಈ ನಟಿ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನಿಸಿದ್ದರು.

Sonu Sood
Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ

ಬುಧವಾರ ಬೆಳಿಗ್ಗೆ ಟಿಬೆಟ್ ಗಡಿ ಮಧ್ಯದಲ್ಲಿರುವ ನೇಪಾಳದ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು,ಅನೇಕ ಮನೆಗಳು, ಜಲವಿದ್ಯುತ್ ಯೋಜನೆಗಳು ಮತ್ತು ಸೇತುವೆಗಳು ನಾಶಗೊಂಡಿವೆ. ಈ ದುರಂತದಲ್ಲಿ ಇಲ್ಲಿಯವರೆಗೆ 160 ಜನರು ಸಾವನ್ನಪ್ಪಿದ್ದಾರೆ ಮತ್ತು 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಟಿಬೆಟ್‌ನಲ್ಲಿಯೂ 550 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com