

ಸಿನಿಮಾ ಪ್ರದರ್ಶನ ಕಂಪನಿ ಪಿವಿಆರ್ ಐನಾಕ್ಸ್, ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಹಾಗೂ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಜನಪ್ರಿಯ ಬಾಲಿವುಡ್ ರೋಮ್ಯಾಂಟಿಕ್-ಕಾಮಿಡಿ ಸಿನಿಮಾ "ಬ್ಯಾಂಡ್ ಬಾಜಾ ಬಾರಾತ್" ಜನವರಿ 16 ರಂದು ಮರು ಬಿಡುಗಡೆ ಮಾಡಲು ಸಜ್ಜಾಗಿದೆ.
ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರವು ರಣವೀರ್ ಸಿಂಗ್ ಅವರ ಚೊಚ್ಚಲ ಸಿನಿಮಾ ಆಗಿದ್ದು, ಡಿಸೆಂಬರ್ 10, 2010 ರಂದು ಮೊದಲು ಬಿಡುಗಡೆಯಾಗಿತ್ತು.
ಈ ಸಿನಿಮಾ ದೆಹಲಿಯ ವಿವಾಹ ಯೋಜನೆ(Wedding Planning) ಉದ್ಯಮದ ಹಿನ್ನೆಲೆಯಲ್ಲಿ ಇಬ್ಬರು ಸ್ನೇಹಿತರ ಪ್ರೀತಿ ಮತ್ತು ವೃತ್ತಿಜೀವನದ ಕಥೆಯನ್ನು ಹೇಳುತ್ತದೆ.
ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಯಿತು ಮತ್ತು ರಣವೀರ್ ಸಿಂಗ್ ಅವರ ಬಾಲಿವುಡ್ ಪಾದಾರ್ಪಣೆಗೆ ಸಾಕ್ಷಿಯಾಯಿತು
Advertisement