

ಬಾಲಿವುಡ್ ನಟ ವರುಣ್ ಧವನ್ ಅಭಿನಯದ 'Border 2' ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಜೈಸಲ್ಮಾರ್ ನಲ್ಲಿ 'Ghar Kab Aaoge'ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂಧೂರ ಮತ್ತು ' ಬಾರ್ಡರ್' ಸಿನಿಮಾ ಜೊತೆಗಿನ ವೈಯಕ್ತಿಕ ಸಂಬಂಧ ಕುರಿತು ವರುಣ್ ಧವನ್ ಮಾತನಾಡಿದರು. 1997ರಲ್ಲಿ ಬಿಡುಗಡೆಯಾದ ಬಾರ್ಡರ್ ಚಿತ್ರ ಹೇಗೆ ಜನರನ್ನು ಸೇನೆ ಸೇರಲು ಪ್ರೇರೆಪಿಸಿತು ಎಂಬುದನ್ನು ಹಂಚಿಕೊಂಡರು.
ತೆರೆ ಮೇಲೆ ಸೈನಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ಆ ಚಿತ್ರದಲ್ಲಿನ ಧೈರ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ದೇಶದ ಜನರ ಮನಸ್ಸನ್ನು ಗೆದ್ದಿತ್ತು. ಸನ್ನಿ ಡಿಯೋಲ್ ಮತ್ತು ಬಾರ್ಡರ್ ಚಿತ್ರದಿಂದ ಇದೆಲ್ಲಾ ಸಾಧ್ಯವಾಯಿತು. ಇದೇ ರೀತಿಯ ಪಾತ್ರವನ್ನು ಬಾರ್ಡರ್ 2 ನಲ್ಲಿ ಮಾಡಿರುವುದಾಗಿ ಹೇಳಿದರು.
ಇನ್ನೂ ಆಪರೇಷನ್ ಸಿಂಧೂರ ಕುರಿತು ಮಾತನಾಡಿದ ವರುಣ್ ಧವನ್, ನಮ್ಮ ದೇಶ ಶಾಂತಿಗೆ ಹೆಸರಾಗಿದೆ. ಆದರೆ, ಆದರೆ ಯುವ ಜನತೆ ತೋರಿಸುವ 'ಬಾರ್ಡರ್' ನಂತಹ ಸಿನಿಮಾ ಮಾಡುವುದು ಅಷ್ಟೇ ಮುಖ್ಯ, ನಾವು ಯಾವುದೇ ಬೆದರಿಕೆಯ ವಿರುದ್ಧ ತಿರುಗೇಟು ನೀಡಬೇಕಾಗುತ್ತದೆ ಎಂದರು.
Advertisement