ಸುನಿಲ್ ಗವಾಸ್ಕರ್‌ಗಾಗಿ 'ಧುರಂಧರ್ 2' ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದೇನೆ': ನಟ ರಾಕೇಶ್ ಬೇಡಿ

ದಯವಿಟ್ಟು ನೀವು ಚಿತ್ರವನ್ನು ನೋಡುತ್ತಿರುವಾಗ ಅದರ ದೃಶ್ಯಗಳನ್ನು ಚಿತ್ರೀಕರಿಸಬೇಡಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ.
Rakesh Bedi and Sunil Gavaskar
ರಾಕೇಶ್ ಬೇಡಿ ಮತ್ತು ಸುನೀಲ್ ಗವಾಸ್ಕರ್
Updated on

ಧುರಂಧರ್ 2 ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿರುವ ಬಾಲಿವುಡ್ ನಟ ರಾಕೇಶ್ ಬೇಡಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಚಿತ್ರದ ದೃಶ್ಯಗಳನ್ನು ರೆಕಾರ್ಡ್ ಮಾಡುವುದು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ತಡೆಯುವಂತೆ ಪ್ರೇಕ್ಷಕರಿಗೆ ಒತ್ತಾಯಿಸಿದ್ದಾರೆ.

ಜೊತೆಗೆ, ಹಿರಿಯ ನಟ ಇತ್ತೀಚೆಗೆ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆಯೂ ಮಾತನಾಡಿದ್ದಾರೆ.

'ಧುರಂಧರ್ 2 ಚಿತ್ರದ ಭಾಗವಾಗಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಧುರಂಧರ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಎಲ್ಲ ರೀತಿಯ ದಾಖಲೆಗಳನ್ನು ಮುರಿದಿರುವುದು ಮಾತ್ರವಲ್ಲದೆ, ಎಲ್ಲ ದಾಖಲೆಗಳನ್ನು ಧ್ವಂಸಗೊಳಿಸಿತು ಎಂದು ನಾನು ಹೇಳಲೇಬೇಕು. ಇದು ಭಾರತ ಮತ್ತು ಪ್ರಪಂಚದಾದ್ಯಂತದ ಜನರ ಹೃದಯಗಳನ್ನು ಗೆದ್ದಿದೆ. ಇದು ವಾಣಿಜ್ಯಿಕವಾಗಿ ಹಿಟ್ ಆಗಿರುವುದು ಮಾತ್ರವಲ್ಲದೆ, ಚಿತ್ರವನ್ನು ನೋಡಿದ ಭಾರತೀಯ ಜನರ ಮೇಲೆಯೂ ಪ್ರಭಾವ ಬೀರುತ್ತಿದೆ. ಪ್ರತಿಕ್ರಿಯೆಗಳು, ಕಲೆಕ್ಷನ್‌ಗಳು ಅಭೂತಪೂರ್ವ, ಕೇಳಿರದ ಮತ್ತು ಸಾಟಿಯಿಲ್ಲದವು. ಈ ಚಿತ್ರವು ಆಸಕ್ತಿಯುತ ಮತ್ತು ಪ್ರಭಾವಶಾಲಿಯಾದ ಹಲವು ಸಕಾರಾತ್ಮಕ ಗುಣಗಳನ್ನು ಹೊಂದಿದೆ! ಎಂದಿದ್ದಾರೆ.

'ಆದರೆ, ನಾನು ಒಂದು ವಿನಂತಿಯನ್ನು ಮಾಡಬೇಕಾಗಿದೆ. ದಯವಿಟ್ಟು ನೀವು ಚಿತ್ರವನ್ನು ನೋಡುತ್ತಿರುವಾಗ ಅದರ ದೃಶ್ಯಗಳನ್ನು ಚಿತ್ರೀಕರಿಸಬೇಡಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ. ಏಕೆಂದರೆ, ಅವು ಸ್ಪಾಯ್ಲರ್‌ಗಳಾಗಿವೆ! ಮತ್ತು ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ. ಏಕೆಂದರೆ ಅದು ಸರಿಯಲ್ಲ' ಎಂದು ಮನವಿ ಮಾಡಿದ್ದಾರೆ.

'ನಿನ್ನೆ ನಾನು ಭಾರತದ ಶ್ರೇಷ್ಠ ಕ್ರೀಡಾಪಟು ಸುನೀಲ್ ಗವಾಸ್ಕರ್ ಜಿ ಅವರನ್ನು ಭೇಟಿಯಾದೆ ಮತ್ತು ಅವರು 'ರಾಕೇಶ್ ಜಿ ಫಿಲ್ಮ್ ಕೆ ಟಿಕೆಟ್ ನಹಿ ಮಿಲ್ ರಹೆ, ಕುಚ್ ಕರ್ಕೆ ಇಸ್ಕಾ ಇಂತೆಜಾಮ್ ಕಿಜಿಯೇ' (('ರಾಕೇಶ್ ಜಿ, ನನಗೆ ಚಿತ್ರಕ್ಕೆ ಟಿಕೆಟ್‌ಗಳು ಸಿಗುತ್ತಿಲ್ಲ, ದಯವಿಟ್ಟು ಏನಾದರೂ ವ್ಯವಸ್ಥೆ ಮಾಡಿ) ಎಂದು ಹೇಳಿದರು. ಹಾಗಾಗಿ, ನಾನು ಅವರಿಗೆ ಕೆಲವು ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನಗೆ ಅದು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

'ಮತ್ತೊಮ್ಮೆ ನಾನು ವಿನಂತಿಸುತ್ತೇನೆ ದಯವಿಟ್ಟು ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ. ಆಪ್ ನೆ ಮಜೆಯ್ ಲೆ ಲಿಯೇ ಫಿಲ್ಮ್ ಕಾ (ನೀವು ಚಿತ್ರವನ್ನು ಆನಂದಿಸಿದ್ದೀರಿ), ಈಗ ಉಳಿದವರೂ ಸಹ ಅದನ್ನು ಆನಂದಿಸಲಿ. ಧನ್ಯವಾದಗಳು' ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದ್ದಾರೆ.

Rakesh Bedi and Sunil Gavaskar
Asia Cup 2025: ಪಾಕಿಸ್ತಾನದ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಕೇಳಿಬಂದ ಟೀಕೆಗಳಿಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com